

ಗುಳೇದಗುಡ್ಡ: ವಸುದೈವ ಕುಟುಂಬಕಂ ಎಂದು ಭಗವದ್ಗೀತೆ ಮೂಲಕ ಜಗತ್ತೇ ಒಂದು ಕುಟುಂಬ ಎಂದು ಸಾರಿದ ಶ್ರೀಕೃಷ್ಣ ಇಡೀ ಜಗತ್ತನ್ನೇ ಪ್ರೀತಿಸಿದವರು ಎಂದು ಯಾದವ ಸಮಾಜದ ಜಿಲ್ಲಾಧ್ಯಕ್ಷ ಭೀಮಸಿ ಜಾನಮಟ್ಟಿ ಹೇಳಿದರು.
ಶ್ರಿಕೃಷ್ಣ ಜನ್ಮಾಷ್ಟಮಿ ನಿಮಿತ್ತ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಬುಧವಾರ ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಹಿಂದು ಪುರಾಣಗಳಲ್ಲಿ ಶ್ರೀಕೃಷ್ಣನಿಗೆ ವಿಶಿಷ್ಟ ಸ್ಥಾನವಿದೆ. ಜಗತ್ತಿಗೆ ಪ್ರೀತಿ, ಪ್ರೇಮ, ಸಹಬಾಳ್ವೆಯ ಸಂದೇಶ ನೀಡಿದ ಶ್ರೀಕೃಷ್ಣನ ನುಡಿಗಳು ಇಂದಿಗೂ ಪ್ರಸ್ತುತ ಎಂದರು.
ತಹಸೀಲ್ದಾರ್ ಎಸ್.ಎಫ್. ಬೊಮ್ಮಣ್ಣವರ, ವೀರೇಶ ಬಡಿಗೇರ, ಎಂ.ಎಂ. ತುಪ್ಪದ, ದ್ಯಾವಪ್ಪ ತಿಮ್ಮನಹಟ್ಟಿ, ಚಂದ್ರಪ್ಪ ಸೂರಕೊಪ್ಪ, ರಮೇಶ ಬಿದರಿ, ಪರಸಪ್ಪ ಕೋರಿ, ಭೀಮಸಿ ಗಾಳಿ, ಸುರೇಶ ಸಿಲಿ, ವಿಶ್ವನಾಥ ಯಂಕಂಚಿ, ಹನುಮಂತ ಹೊಸೂರ ಇತರರಿದ್ದರು.