ಧರ್ಮದ ಮೌಲ್ಯ ಕಾಪಾಡಲು ಜನಿಸಿದ ಶ್ರೀಕೃಷ್ಣ

ಯಲಬುರ್ಗಾ ತಾಲೂಕಿನ ಹುಲೇಗುಡ್ಡದಲ್ಲಿ ಶ್ರೀಕೃಷ್ಣ ಜಯಂತಿ ಆಚರಿಸಲಾಯಿತು. ನ್ಯಾಯವಾದಿ ಕುದುರೆಯಲ್ಲಪ್ಪ ಮಾಲಿಗೌಡ್ರು, ಶಿಕ್ಷಕ ಸಂತೋಷ ಕುಲಕರ್ಣಿ, ಮುಖ್ಯಶಿಕ್ಷಕರಾದ ಬಾಳಪ್ಪ ಬಂಡ್ಲಿ, ಈರಪ್ಪ ಗಾಣಿಗೇರ, ಗುರುನಾಥ್ ಗಡ್ಡದ, ಗ್ರಾಪಂ ಮಾಜಿ ಸದಸ್ಯ ಹನುಮಪ್ಪ ಮಾಲಿಗೌಡ್ರು ಇತರರಿದ್ದರು.
ಯಲಬುರ್ಗಾ ತಾಲೂಕಿನ ಹುಲೇಗುಡ್ಡದಲ್ಲಿ ಶ್ರೀಕೃಷ್ಣ ಜಯಂತಿ ಆಚರಿಸಲಾಯಿತು. ನ್ಯಾಯವಾದಿ ಕುದುರೆಯಲ್ಲಪ್ಪ ಮಾಲಿಗೌಡ್ರು, ಶಿಕ್ಷಕ ಸಂತೋಷ ಕುಲಕರ್ಣಿ, ಮುಖ್ಯಶಿಕ್ಷಕರಾದ ಬಾಳಪ್ಪ ಬಂಡ್ಲಿ, ಈರಪ್ಪ ಗಾಣಿಗೇರ, ಗುರುನಾಥ್ ಗಡ್ಡದ, ಗ್ರಾಪಂ ಮಾಜಿ ಸದಸ್ಯ ಹನುಮಪ್ಪ ಮಾಲಿಗೌಡ್ರು ಇತರರಿದ್ದರು.
Published on

ಯಲಬುರ್ಗಾ: ವಿಷ್ಣುವಿನ 8ನೇ ಅವತಾರ ಶ್ರೀಕೃಷ್ಣ. ಬಾಲ್ಯದ ದಿನಗಳಲ್ಲಿ ಕಷ್ಟ ಅನುಭವಿಸಿ ಭರತ ಖಂಡದ ಪ್ರಭಾವಿ ವ್ಯಕ್ತಿಯಾಗಿ ಬೆಳೆದನು ಎಂದು ನ್ಯಾಯವಾದಿ ಕುದರೆಯಲ್ಲಪ್ಪ ಮಾಲಿಗೌಡ್ರು ಹೇಳಿದರು.

ತಾಲೂಕಿನ ಹುಲೇಗುಡ್ಡದಲ್ಲಿ ಯಾದವ ಸಮಾಜ ಸೇವಾ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀಕೃಷ್ಣ ಧರ್ಮದ ಮೌಲ್ಯ ಕಾಪಾಡಲು, ಧರ್ಮವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಜನಿಸಿದನು ಎಂದರು.

ಶಿಕ್ಷಕ ಸಂತೋಷ ಕುಲಕರ್ಣಿ ಮಾತನಾಡಿ, ಶ್ರೀಕೃಷ್ಣ ದೇವಕಿ ಮತ್ತು ವಾಸುದೇವನಿಗೆ ಭಾದ್ರಪದ ಕತ್ತಲೆಯ ಅಷ್ಟಮಿ ತಿಥಿಯಂದು ಮಥುರಾ ನಗರದಲ್ಲಿ ಜನಿಸಿದ. ದೇವಕಿಯ ಸಹೋದರ ಮಥುರಾದ ರಾಕ್ಷಸ ರಾಜ ಕಂಸ ತನ್ನ ಪಾಪಗಳ ಪರಿಣಾಮವಾಗಿ ಸಹೋದರಿಯ ಎಂಟನೇ ಮಗನಿಂದ ಕೊಲ್ಲಲ್ಪಡುತ್ತಾನೆ ಎಂದು ಭವಿಷ್ಯ ಹೇಳಿತ್ತು. ಹೀಗಾಗಿ ಕಂಸ ದೇವಕಿ ಮಕ್ಕಳನ್ನು ಹುಟ್ಟಿದ ತಕ್ಷಣ ಕೊಲ್ಲಲು ಪ್ರಯತ್ನಿಸುತ್ತಿದ್ದ. ಎಂಟನೇ ಮಗು ಹುಟ್ಟಿದಾಗ ಅರಮನೆಯನ್ನು ನಿದ್ರೆಗೆ ಜಾರುವಂತೆ ಮಾಡಿ ವಾಸುದೇವ ಮಗುವನ್ನು ರಕ್ಷಿಸಿ ವೃಂದಾವನದ ಯಶೋದಾ ಹಾಗೂ ನಂದನ ಮನೆಗೆ ಬಿಟ್ಟನು. ಮಗು ವಿಷ್ಣುವಿನ ಅಭಿವ್ಯಕ್ತಿಯಾಗಿದ್ದು, ಶ್ರೀಕೃಷ್ಣ ಎಂದು ಹೆಸರು ಪಡೆದು ಕಂಸನನ್ನು ಕೊಂದು ಭಯಾನಕ ಆಳ್ವಿಕೆ ಕೊನೆಗೊಳಿಸಿದನು ಎಂದು ತಿಳಿಸಿದರು.

ಮುಖ್ಯಶಿಕ್ಷಕರಾದ ಬಾಳಪ್ಪ ಬಂಡ್ಲಿ, ಈರಪ್ಪ ಗಾಣಿಗೇರ, ಗುರುನಾಥ್ ಗಡ್ಡದ, ಗ್ರಾಪಂ ಮಾಜಿ ಸದಸ್ಯ ಹನುಮಪ್ಪ ಮಾಲಿಗೌಡ್ರು, ಪ್ರಮುಖರಾದ ಶರಣಪ್ಪ ಮಾಲಿಗೌಡ್ರು, ವೆಂಕಟೇಶ್ ಗೊಲ್ಲರ, ಯಂಕಪ್ಪ ಜುಟ್ಲರ, ಮಂಜು ಕಲ್ಲೂರು, ದುರಗನಗೌಡ ಮಾಲಿಪಾಟೀಲ್, ಶಿಕ್ಷಕ ಸಂತೋಷ ಕುಲಕರ್ಣಿ, ಶರಣಪ್ಪ ಭಜ್ಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net