

ಕಡೂರು: ಪಟ್ಟಣದ ವಿಶ್ವಭಾರತಿ ಶಾಲೆ ಆವರಣದಲ್ಲಿ ಗುರುವಾರ ನೂರಾರು ಮಕ್ಕಳು ಕೃಷ್ಣ ಮತ್ತು ರಾಧೆ ವೇಷಧಾರಿಗಳಾಗಿ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನಸೆಳೆದರು.
ಪ್ರತಿ ವರ್ಷದಂತೆ ಶ್ರೀ ಕೃಷ್ಣಜನ್ಮಾಷ್ಟಮಿ ಅಂಗವಾಗಿ ಶ್ರೀಕೃಷ್ಣ ಮತ್ತು ರಾಧೆಯರ ವೇಷ ಸ್ಪರ್ಧೆಯನ್ನು ಮಕ್ಕಳಿಗಾಗಿ ಶಾಲೆಯಿಂದ ಏರ್ಪಡಿಸಲಾಗಿತ್ತು. ವಿಶೇಷವಾಗಿ ಮುಸ್ಲಿಂ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯರ ವೇಷ ಧರಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ವಿಶ್ವಭಾರತಿ ಶಾಲೆ ಮುಖ್ಯಶಿಕ್ಷಕ ಶಶಿಧರ್ ಮಾತನಾಡಿ, ಪಟ್ಟಣದ 35 ಶಾಲೆಗಳಿಂದ ಪಾಲಕರು ಮಕ್ಕಳಿಗೆ ವೇಷ ತೊಡಿಸಿಕೊಂಡು ಆಗಮಿಸಿದ್ದರು. ಸ್ಪರ್ಧೆಯಲ್ಲಿ 120 ಮಕ್ಕಳು ಭಾಗವಹಿಸಿದ್ದು, 80 ಮಕ್ಕಳು ಶ್ರೀಕೃಷ್ಣನ ವೇಷಧರಿಸಿದರೆ, 40 ಮಕ್ಕಳು ರಾಧೆಯ ವೇಷ ಧರಿಸಿದ್ದರು. ಬೆಣ್ಣೆ ಕೃಷ್ಣ, ತುಂಟ ಕೃಷ್ಣ, ಮುದ್ದು ಕೃಷ್ಣ, ಬಾಲಕೃಷ್ಣ ಹಾಗೂ ರಾಧೆಯರಿಗೆ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಗಿತ್ತು ಎಂದರು.
41 ವರ್ಷಗಳಿಂದ ಶ್ರೀಕೃಷ್ಣ ಮತ್ತು ರಾಧೆಯರ ವೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಸ್ಪರ್ಧೆಯಲ್ಲಿ 40ಕ್ಕೂ ಹೆಚ್ಚು ಮುಸ್ಲಿಂ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯರ ವೇಷ ಧರಿಸಿ ಭಾಗವಹಿಸಿದ್ದರು. ಮುಸ್ಲಿಂ ಸಮುದಾಯದ ಮಕ್ಕಳಿಗೆ ವಿಶೇಷ ಪ್ರಾತಿನಿಧ್ಯದೊಂದಿಗೆ ಬಹುಮಾನ ವಿತರಿಸಲಾಯಿತು. ತಸ್ಮಿಯಾ (ಪ್ರಥಮ), ಮಾಹಿಯಾ (ದ್ವಿತೀಯ), ಹರ್‌ಮಾನ್ (ತೃತೀಯ) ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಕೆಎಲ್‌ವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿಜಯ್‌ಕುಮಾರ್, ಸುರೇಂದ್ರಹೊಳ್ಳ , ಧ್ರುವತಾರೆ ಪ್ರೌಢಶಾಲೆ ಮುಖ್ಯಶಿಕ್ಷಕ ಎನ್.ರಾಜಣ್ಣ, ಪ್ರದೀಪ್‌ಕುಮಾರ್, ಸಹಶಿಕ್ಷಕರಾದ ಇಂದ್ರಮ್ಮ, ಗೀತಾ ದೇವರಾಜ್, ಮಂಜುಳಾ, ಪುಷ್ಪಾ, ಬಿಂದು, ತನುಜಾ, ಸತೀಶ್, ಮಧು, ಜಯಲಕ್ಷ್ಮೀ ಇತರರಿದ್ದರು.
ಬಹುಮಾನ ವಿಜೇತರು: ಬೆಣ್ಣೆ ಕೃಷ್ಣ ವಿಭಾಗ: ಅಚ್ಯುತ್ ಆರಾಧ್ಯ(ಪ್ರ), ನಿಕ್ಷೇಪಾ(ದ್ವಿ), ಹೃತ್ವಿಕ್(ತೃ). ತುಂಟ ಕೃಷ್ಣ ವಿಭಾಗ: ಸುಶಾಂತ್ (ಪ್ರ), ಕೃತಿಕಾ (ದ್ವಿ), ಪ್ರೀತಮ್ (ತೃ). ಮುದ್ದು ಕೃಷ್ಣ ವಿಭಾಗ: ಲೇಖಕ್ (ಪ್ರ), ಸಾದ್ವಿನಿ (ದ್ವಿ), ಪ್ರೇಕ್ಷಾ (ತೃ). ಬಾಲಕೃಷ್ಣ ವಿಭಾಗ: ಹುವಿಕ್ಷಾ (ಪ್ರ), ಸಾಮ್ರಾಟ್ (ದ್ವಿ), ನೂತನ್ (ತೃ). ರಾಧೆ ವೇಷ: ಜ್ಞಾನ (ಪ್ರ), ಶ್ರೇಯಾಚಂದ್ರ (ದ್ವಿ), ಯತೀಕ್ಷು (ತೃ).