

ಚಿತ್ರದುರ್ಗ: ಕೃಷ್ಣ ಸದಾ ಪ್ರಕೃತಿಯೊಂದಿಗೆ ಬೆರೆಯುತ್ತಿದ್ದ ಮಹಾತ್ಮ ಎಂದು ಲೇಖಕ ಎಚ್.ಆನಂದ್ ಕುಮಾರ್ ಹೇಳಿದರು.
ಜಿಪಂ, ಜಿಲ್ಲಾಡಳಿತ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀಕೃಷ್ಣ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಜಾತಿ ಸಮಾಜವನ್ನೂ ಮೀರಿ ಎಲ್ಲ ವರ್ಗದ ಜನರನ್ನು ಸಮಚಿತ್ತದಿಂದ ನೋಡಿದ. ಹಿಂದುಳಿದ ಜಾಂಬವಂತನ ಮಗಳನ್ನು ಮದುವೆಯಾದ. ಸರ್ವಸ್ವವನ್ನು ಕಳೆದುಕೊಂಡಿದ್ದ ಪಾಂಡವರ ಪರ ನಿಂತು ಕುರುಕ್ಷೇತ್ರದಲ್ಲಿ ಗೆಲುವು ತಂದಿತ್ತ. ಹೀಗಾಗಿ ಶ್ರೀಕೃಷ್ಣ ಜಯದ ಸಂಕೇತ ಎಂದು ಬಣ್ಣಿಸಿದರು.
ಡಿಎಚ್‌ಒ ಡಾ.ಆರ್.ರಂಗನಾಥ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಯಾದವ ಸಮುದಾಯದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ, ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಿಕಾಂತ, ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಸುಧಾಕರ್, ಧನಂಜಯ, ಹೊನ್ನೂರು ತಿಮ್ಮಪ್ಪ, ಈಶ್ವರಪ್ಪ, ಟಿ.ತಿಮ್ಮಪ್ಪ, ನಾಗೇಂದ್ರಪ್ಪ ಇದ್ದರು.