

ಚಿಕ್ಕೋಡಿ: ಭಗವಾನ್ ಶ್ರೀಕೃಷ್ಣ ಸತ್ಯವಂತ, ಶಕ್ತಿವಂತ, ನೀತಿವಂತ ಆಗಿರುವ ಕಾರಣ ಧರ್ಮ ರಕ್ಷಣೆಯ ಉದ್ದೇಶದಿಂದ ಪಾಂಡವರ ಪಕ್ಷ ಸೇರಿ ಅಧರ್ಮದ ವಿರುದ್ಧ ನಿಂತು ಧರ್ಮಕ್ಕೆ ಜಯ ಕೊಡಲು ಕಾರಣವಾಗಿದ್ದಾರೆ ಎಂದು ಸಿಎಲ್‌ಇ ಸಂಸ್ಥೆಯ ಆಡಳಿತಾಧಿಕಾರಿ ಎಸ್.ಐ.ಬಿಸ್ಕೋಪ ಹೇಳಿದರು.
ತಾಲೂಕಿನ ಸಿಎಲ್‌ಇ ಸಂಸ್ಥೆಯ ಎಂ.ಕೆ.ಕವಟಗಿಮಠ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಾರಂಭದಲ್ಲಿ ಮಾತನಾಡಿದರು.
ಚಿಕ್ಕೋಡಿಯ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಹಾದೇವಿ ಹುದ್ದಾರ, ಮುಖ್ಯಶಿಕ್ಷಕ ಬಿ.ಡಿ.ರುಕಡೆ, ಡಿ.ಎಸ್.ಕೋಳಿ, ಸಂಧ್ಯಾ ಮಾಳಿ ಇತರರಿದ್ದರು. ಪ್ರಗತಿ ಮಜಲಟ್ಟಿ ಸ್ವಾಗತಿಸಿದರು. ಸ್ಪರ್ಶ ನೇಜಕರ ನಿರೂಪಿಸಿದರು.