

ವಿಜಯಪುರ : ಅಧರ್ಮವನ್ನು ನಾಶಮಾಡಿ ಧರ್ಮವನ್ನು ಧರೆಯ ಮೇಲೆ ಮರುಸ್ಥಾಪಿಸಲು ಭಗವಾನ ಶ್ರೀಕೃಷ್ಣನು ಭಾರತದ ಪೂಣ್ಯ ಭೂಮಿಯಲ್ಲಿ ಅವತರಿಸಿದ ದಿನವನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತದೆ ಎಂದು ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಅನಾಲೀಸಾ ಬಾಸ್ಕೋ ಹೇಳಿದರು.
ಇಲ್ಲಿನ ವಜ್ರಹನುಮಾನ ನಗರದಲ್ಲಿರುವ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀಕೃಷ್ಣನು ಸತ್ಯ ಮತ್ತು ನ್ಯಾಯದ ಪ್ರತಿಕ ತಡವಾಗಿ ಆದರೂ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಕ್ಕೆ ಸಿಗುತ್ತದೆ ಎನ್ನುವುದ್ನು ಕೃಷ್ಣನು ಕುರುೇತ್ರದ ಯುದ್ಧದಲ್ಲಿ ಇಡೀ ಜಗತ್ತಿಗೆ ಸಾರಿ ಹೇಳಿದ್ದಾನೆ.
ಅಧರ್ಮದ ಮೂಲಕ ಮನುಷ್ಯ ಜಯಗಳಿಸಿದರೆ ಆ ಜಯದ ಸಂತೋಷ ಅನುಭವಿಸಲು ಸಾಧ್ಯವಿಲ್ಲ ಎನ್ನುವುದನ್ನು ಕುರುೇತ್ರ ಯುದ್ಧದ ಕೊನೆಗೆ ದುಯೋರ್ಧನ ದಾರುಣ ಸಾವಿನ ಮೂಲಕ ತಪ್ಪು ಮಾಡಿದವರು ಶಿೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸನ್ನಡತೆಯ ಪಾಠವನ್ನು ಭಾಗವಾನ ಶೀಕೃಷ್ಣನು ಬೋಧಿಸಿದ್ದಾನೆ ಎಂದ ಅವರು, ವಿದ್ಯಾರ್ಥಿಗಳು ಸ್ಪರ್ಧಾಯುಗದಲ್ಲಿ ಅನ್ಯಮಾರ್ಗದ ಮೂಲಕ ಜಯಶೀಲರಾಗದೆ, ಶ್ರೀಕೃಷ್ಣನು ತೋರಿದ ನ್ಯಾಯಮಾರ್ಗದಲ್ಲಿ ಬದುಕು ಮುನ್ನಡೆಸಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಶಾಜು ಜೋಸೆಫ್, ಮಂಜುಳಾ ಪಾಟೀಲ, ಮಯೂರಿ ಗದ್ಯಾಳ, ಶಿವಲೀಲಾ ತೆನೆಹಳ್ಳಿ, ಜ್ಯೋತಿ.ಬಿ.ಡಿ., ರಾಜೇಶ್ವರಿ ಬಂಕೂರ, ಅನಿತಾ ಬೆಳಗುಂಪಿ, ಆಡ್ಲಿನ್, ಮಂಗಳಾ ಪಡನಾಡ ಮತ್ತಿತರರಿದ್ದರು.ವಿಜಯಪುರದ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಕ್ಕಳು ರಾಧಾಕೃಷ್ಣರ ಛದ್ಮವೇಷದಲ್ಲಿ ಕಂಗೊಳಿಸಿದರು.