ಪೊನ್ನಗಿರಿ ದೇವಸ್ಥಾನದಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ

New Project (36)
Published on

ಸುರತ್ಕಲ್: ಸೂರಿಂಜೆ ಕಲಾ ಸಂಭ್ರಮ ವತಿಯಿಂದ ಸೂರಿಂಜೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ದ್ವಿತೀಯ ವರ್ಷದ ಸಾರ್ವಜನಿಕ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು.

ಪೊನ್ನಗಿರಿ ದೇವಳ ಅರ್ಚಕ ಶ್ರೀನಿವಾಸ ಆಸ್ರಣ್ಣ ಚಾಲನೆ ನೀಡಿದರು. ವಿನಯಕುಮಾರ್ ಸೂರಿಂಜೆ, ಅನಿಲ್ ಶೆಟ್ಟಿ ತೇವು ಸೂರಿಂಜೆ, ಮನೋಹರ ಶೆಟ್ಟಿ, ಸುಧಾಕರ ಶೇಣವ, ರಾಧಾಕೃಷ್ಣ ಭಂಡಾರ್ಕರ್, ದಿವಾಕರ ಶೆಟ್ಟಿ, ದಿನೇಶ್ ಶೆಟ್ಟಿ ನಾಯರ್ ಕೋಡಿ, ಜಗನ್ನಾಥ ಶೆಟ್ಟಿ ತೇವು ಸೂರಿಂಜೆ, ರಮೇಶ್ ಶೆಟ್ಟಿ, ಶಶಿಧರ ಶೆಟ್ಟಿ, ಜಯಪ್ರಕಾಶ್ ಸೂರಿಂಜೆ, ನೃತ್ಯ ಸಂಯೋಜಕಿ ಶೈಲಜಾ ಮಧ್ಯ, ಶಶಿಕಲಾ ಶೆಟ್ಟಿ ನಾಯರ್ ಕೋಡಿ, ಪದ್ಮಾವತಿ ಶೆಟ್ಟಿ, ಗಿರೀಶ್ ಪೂಜಾರಿ ಕೋಟೆ, ಕಿರಣ್ ಅಚಾರ್ಯ ಹೊಸಬೆಟ್ಟು, ಜೀತೆಂದ್ರ ಶೆಟ್ಟಿ, ಜಯಶೀಲ ಸೂರಿಂಜೆ, ಪ್ರವೀಣ್ ಶೆಟ್ಟಿ, ಸುಕೇಶ್ ಶೆಟ್ಟಿ ಬೈಲಗುತ್ತು, ದೇವಿ ಕಿರಣ್ ಗಣೇಶಪುರ, ಅಶ್ವಥ್ ಪೂಜಾರಿ, ಪಾರ್ವತಿ ಕೋಟೆ, ವಸುಧಾ ಶೆಟ್ಟಿ, ಕುಸುಮಾಕರ ಶೆಟ್ಟಿ ಕುತ್ತೆತ್ತೂರು, ನರೇಶ್ ಕುಮಾರ್, ಪ್ರಮೀಳಾ ದೀಪಕ್ ಪೆರ್ಮುದೆ, ಪೂಜಾ ಯು.ಕಾಂಚನ್ ಉಪಸ್ಥಿತರಿದ್ದರು.

ಕಲಾ ಸಂಭ್ರಮ ಸೂರಿಂಜೆ ಸಂಘಟಕ ವಿಘ್ನೇಶ್ ಸೂರಿಂಜೆ ಸ್ವಾಗತಿಸಿ. ರಾಜೇಶ್ ಶೆಟ್ಟಿ ವಂದಿಸಿ, ಮನೋಜ್ ಶೆಟ್ಟಿ ನಿರೂಪಿಸಿದರು. ಮುಖ್ಯಶಿಕ್ಷಕಿ ಸವಿತಾ ನಾಯ್ಕ ಹಾಗೂ ಸಮಾಜ ಸೇವಕ ಧನಂಜಯ ಪೂಜಾರಿ ಕೃಷ್ಣಾಪುರ ಅವರನ್ನು ಗೌರವಿಸಲಾಯಿತು. 140 ಸ್ಪರ್ಧಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net