ಮನೆಗೆ ಬರಲಿ ಮಣ್ಣಿನ ಗಣೇಶ,ಪರಿಸರ ಸ್ನೇಹಿ ಗಣಪತಿ ಪೂಜಿಸಲು ಮನವಿ

IMG-20230826-WA0017-1.jpg
Published on

ಹುಬ್ಬಳ್ಳಿ: ಸಂಭ್ರಮ ಸಡಗರಗಳ ಮಧ್ಯೆ ಸೆಪ್ಟೆಂಬರ್ 18ರಂದು ಗಣೇಶ ಚರ್ತುಥಿ ಆಚರಿಸಲು ನಾವು ನೀವೆಲ್ಲರೂ ಸಜ್ಜಾಗಿದ್ದೇವೆ. ಆದರೆ, ನಮ್ಮೆಲ್ಲರ ಭಕ್ತಿ, ಭಾವವು ಸಂಪ್ರದಾಯಕ್ಕೆ ಚ್ಯುತಿ ಆಗದಂತೆ ಪರಿಸರ ಸ್ನೇಹಿ ಮಣ್ಣಿನ ಗೌರಿ- ಗಣೇಶ ಪೂಜೆಗೆ ಮಹತ್ವ ನೀಡುವಂತಿರಬೇಕು.

ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿ ತಂದು ಪೂಜಿಸಿ ಹಬ್ಬ ಆಚರಿಸೋಣ. ನಮ್ಮ ಆಚರಣೆಯಿಂದ ಜಲ, ನೆಲ, ಗಾಳಿ ಮತ್ತು ಪರಿಸರಕ್ಕೆ ಹಾನಿ ಆಗದಂತೆ ಎಚ್ಚರಿಕೆ ವಹಿಸೋಣ ಎಂದು ಸಾಮಾಜಿಕ ಕಾರ್ಯಕರ್ತ ರಜತ ಉಳ್ಳಾಗಡ್ಡಿಮಠ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಧಾರವಾಡ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ವಿಗ್ರಹ ಬಳಸದಂತೆ ನಿಗಾ ವಹಿಸಬೇಕೆಂದು ಒತ್ತಾಯಿಸಿದ್ದಾರೆ.

ನಾವು ನೀವೆಲ್ಲರೂ ಸ್ವಯಂ ಪ್ರೇರಿತರಾಗಿ ಪಿಒಪಿ ತಿರಸ್ಕರಿಸಿ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಯನ್ನು ಕಡ್ಡಾಯವಾಗಿ ಬಳಸಬೇಕು. ಪಿಒಪಿ ಗಣೇಶ ಮೂರ್ತಿ ವಿಸರ್ಜನೆ ಮಾಡುವುದರಿಂದ ಕೆರೆಗಳು, ನದಿಗಳು ಮತ್ತು ಸಮುದ್ರದ ನೀರು ವಿಷಪೂರಿತವಾಗಿ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ.

ಈ ವರ್ಷ ಮರುಬಳಕೆಯ ಕಾಗದ, ನೈಸರ್ಗಿಕ ಜೇಡಿ ಮಣ್ಣಿನಿಂದ ತಯಾರಿಸಿದ ಗಣೇಶನನ್ನು ಮನೆಗೆ ತರಬೇಕು. ಈ ವರ್ಷ ಒಂದು ಬದಲಾವಣೆಯಾಗಲಿ ಎಂದು ಉಳ್ಳಾಗಡ್ಡಿಮಠ ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net