

ಹುಬ್ಬಳ್ಳಿ: ಅದ್ದೂರಿ ಉತ್ಸವಕ್ಕೆ ಹೆಸರಾಗಿರುವ ಇಲ್ಲಿಯ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಸೆ. 27 ಹಾಗೂ 28ರಂದು ತೆರೆ ಬೀಳಲಿದೆ.
ಹಳೇಹುಬ್ಬಳ್ಳಿ ಭಾಗದಲ್ಲಿ ಒಂಬತ್ತು ದಿನಗಳ ಕಾಲ ವಿರಾಜಮಾನನಾಗಿ ಭಕ್ತರಿಗೆ ದರ್ಶನ ನೀಡಿದ ಗಣೇಶನಿಗೆ ಬುಧವಾರ ಸಂಜೆ ವಿದಾಯ ಹೇಳಲಾಗುತ್ತಿದೆ. ಹಳೇಹುಬ್ಬಳ್ಳಿ ದುರ್ಗದಬೈಲ್ನಲ್ಲಿ ಗಣೇಶ ಮೂತಿರ್ ವಿಸರ್ಜನೆ ಮೆರವಣಿಗೆಗೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಚಾಲನೆ ನೀಡುವರು.
ಹತ್ತು ದಿನಗಳ ಕಾಲ ಲಾಂತರ ಜನರಿಗೆ ದರ್ಶನ ನೀಡಿ ಸಂಭ್ರಮ ಹೆಚ್ಚಿಸಿದ ಹುಬ್ಬಳ್ಳಿಯ ಸಾರ್ವಜನಿಕ ಗಣೇಶೋತ್ಸವ ಸೆ. 28ರಂದು ಸಮಾರೋಪಗೊಳ್ಳಲಿದೆ.
ಶ್ರೀಗಣೇಶ ವಿಗ್ರಹಗಳ ಸಾಮೂಹಿಕ ವಿಸರ್ಜಣೆ ಮೆರವಣಿಗೆಗೆ ಹುಬ್ಬಳ್ಳಿಯ ದುರ್ಗದಬೈಲ್ನಲ್ಲಿ ಬೆಳಗ್ಗೆ 11ಕ್ಕೆ ಚಾಲನೆ ನೀಡಲಾಗುತ್ತದೆ.
ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮೆಜೇಥಿಯಾ, ದುರ್ಗದಬೈಲ್ ಗಣೇಶೋತ್ಸವ ಮಂಡಳಿಯ ಅಧ್ಯ ರವಿ ರೇವಣಕರ, ಮಹಾಮಂಡಳ ಅಧ್ಯ ಮೋಹನ ಲಿಂಬಿಕಾಯಿ ಇತರರು ಪಾಲ್ಗೊಳ್ಳುವರು.