

ನರೇಗಲ್ಲ: ಪಟ್ಟಣದ ಅನ್ನದಾನ ವಿಜಯ ಪ್ರೌಢಶಾಲೆಯಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಮುಖ್ಯ ಶಿಕ್ಷಕ ಎಂ.ಬಿ.ಸಜ್ಜನರ ಮಾತನಾಡಿ, ‘ವಾಲ್ಮೀಕಿ ಮಹರ್ಷಿಗಳು ಮಗುವಾಗಿದ್ದಾಗ ಭಿಲಾನಿ ಅವರನ್ನು ಕದ್ದುಕೊಂಡು ಹೋಗುತ್ತಾರೆ. ಅಂದಿನಿಂದ ವಾಲ್ಮೀಕಿ ಮಹರ್ಷಿಗಳು ಭಿಲ್ ಸಮುದಾಯದಲ್ಲಿ ಬೆಳೆದರು. ರತ್ನಾಕರನಾಗಿದ್ದ ವಾಲ್ಮೀಕಿ ಮಹರ್ಷಿಗಳು ನಾರದ ಮುನಿಗಳ ಸೂಚನೆಯಂತೆ ರಾಮ ನಾಮವನ್ನು ಜಪಿಸಲು ಪ್ರಾರಂಭಿಸುತ್ತಾರೆ. ಆದರೆ, ಅವರ ಬಾಯಿಂದ ಮರಾ-ಮರಾ ಎಂಬ ಪದಗಳು ಮಾತ್ರ ಹೊರಬರುತ್ತಿದ್ದವು. ನಾರದ ಮುನಿಯು ಇದನ್ನು ಪುನರುಚ್ಚರಿಸುತ್ತಿರಿ, ರಾಮನು ಇದರಲ್ಲಿ ಅಡಗಿದ್ದಾನೆ ಎಂದು ಹೇಳಿದರು. ಆಗ ರತ್ನಾಕರನು ಒಂದು ಸ್ಥಳದಲ್ಲಿ ಕುಳಿತು ರಾಮನ ನಾಮವನ್ನು ಜಪಿಸಿದನು. ಅವನ ತಪಸ್ಸಿಗೆ ಪ್ರಸನ್ನನಾದ ಬ್ರಹ್ಮನು ಅವನ ದೇಹದ ಮೇಲೆ ಬೆಳೆದ ಹುತ್ತವನ್ನು ನೋಡಿ ಅವನು ರತ್ನಾಕರ ವಾಲ್ಮೀಕಿ ಎನ್ನುವ ಹೆಸರನ್ನು ನೀಡಿದನು. ಹಾಗೂ ರಾಮಾಯಣ ಬರೆಯುವಂತೆ ಬ್ರಹ್ಮ ದೇವನು ವಾಲ್ಮೀಕಿಯನ್ನು ಪ್ರೇರೇಪಿಸಿದನು. ನಂತರ 24,000 ಪದ್ಯಗಳನ್ನೊಳಗೊಂಡ ರಾಮಾಯಣವನ್ನು ಸಂಸ್ಕೃತದಲ್ಲಿ ಬರೆಯುತ್ತಾರೆ. ಈ ರಾಮಾಯಣವನ್ನೇ ಅತ್ಯಂತ ಹಳೆಯ ರಾಮಾಯಣ ಎಂದು ಕರೆಯಲಾಗುತ್ತದೆ’ ಎಂದರು.
ಎಂ.ವಿ. ಬಿಂಗಿ. ಎಸ್.ಬಿ. ಬೂದಿಹಾಳ, ಎನ್.ವಿ. ಕೊಡಿಕೊಪ್ಪಮಠ, ಎನ್. ನಿಡಶೇಶಿ, ಡಿ.ಎಸ್.ಬಂಡಿವಡ್ಡರ, ಡಿ.ಎಸ್. ಕೊಳಿವಾಡ ಇತರರಿದ್ದರು.