ಲೋಪಿ ಕಾರ್ಯ ಸಂಪನ್ನ

Lopi Karya Sampanna
ತೇರದಾಳ ಪಟ್ಟಣದ ಲೋಪಿ ಮುಕ್ತಾಯ ನಿಮಿತ್ತ ಜೈನ ಸಮಾಜದಿಂದ ಪಲ್ಲಕ್ಕಿ ಮೆರವಣಿಗೆ ಜರುಗಿತು.
Published on

ತೇರದಾಳ: ಜೈನ ಧರ್ಮದ ಸೋಳಾಕಾರ (ಲೋಪಿ) ಪೂಜಾ ವಿಸರ್ಜನೆ ಕಾರ್ಯಕ್ರಮ ಪಟ್ಟಣದಲ್ಲಿ ಭಾನುವಾರ ಸಡಗರದಿಂದ ಜರುಗಿತು.

ಕಿಲ್ಲಾ ಭಾಗದಲ್ಲಿರುವ ನೇಮಿನಾಥ ಗೊಂಕ ಜಿನಾಲಯ ಹಾಗೂ ಪೇಟೆ ಭಾಗದ ಅಜಿತನಾಥ ಬೋಗಾರ ಜಿನಾಲಯದಲ್ಲಿ 16 ದಿನ ಪೂಜೆ, ಆರತಿ ಮಾಡುವುದು, ಮಂತ್ರ ಪಠಣ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಜಿನಾಲಯದ ಪಂಡಿತರು ನೆರವೇರಿಸಿದರು.

ಕಾರ್ಯಕ್ರಮದ ವಿಸರ್ಜನೆ ನಿಮಿತ್ತ ಶನಿವಾರ ನೇಮಿನಾಥ ಗೊಂಕ ಜಿನಾಲಯದಲ್ಲಿ ಬೆಳಗ್ಗೆ ಅಭಿಷೇಕ, ಪೂಜೆ ಕಾರ್ಯಕ್ರಮ ನಡೆದವು.

ಬಳಿಕ ಜಿನಾಲಯದಿಂದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಉತ್ಸವ ಮರಳಿ ಜಿನಾಲಯ ತಲುಪಿತು. ಉತ್ಸವದಲ್ಲಿ ಶ್ರಾವಕಿಯರು ಕುಂಭ ಹೊತ್ತು ಮೆರಗು ನೀಡಿದರು.

ದಾರಿಯುದ್ದಕ್ಕೂ ಜೈನ ಧರ್ಮದ ಘೋಷನೆಗಳನ್ನು ಕೂಗಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net