

ನೆಲಮಂಗಲ: ಸಮಾಜದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ಶ್ರಮಿಸುತ್ತಿದೆ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ತಿಳಿಸಿದರು.
ನಗರದ ಚಿಕ್ಕೆಲ್ಲಯ್ಯ ಸಮುದಾಯ ಭವನದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಶೈಕ್ಷಣಿಕ, ಅರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಬಲರಾಗಬೇಕು ಎಂದು ಬಿಜೆಪಿ ಹಲವು ಯೋಜನೆ ಜಾರಿಗೊಳಿಸಿದೆ. ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ಕೇಂದ್ರ ಬಿಜೆಪಿ ಸರ್ಕಾರ ಶ್ರಮಿಸುತ್ತಿದೆ. ಕಾಂಗ್ರೆಸ್ ಗ್ಯಾರಂಟಿ ಹೆಸರಿನಲ್ಲಿ ಲೂಟಿ ಮಾಡುತ್ತಿದೆ. ಮಹಿಳೆಯರು ಜ್ಞಾನವಂತರಾಗಿ, ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣರಾಗಬೇಕಿದೆ. ಕುಟುಂಬದ ಜತೆಗೆ ಸಮಾಜ ತಿದ್ದು ಕಾರ್ಯಕ್ಕೆ ಮಹಿಳೆಯರು ಮುಂದಾಗಬೇಕು ಎಂದರು.
ಮಹಿಳಾ ಮೋರ್ಚಾ ಗ್ರಾಮಾಂತರ ಜಿಲ್ಲಾಧ್ಯಕ್ಷೆ ಅನುರೆಡ್ಡಿ ಮಾತನಾಡಿ, ಮಹಿಳೆಯರು ಮನೆ ಜವಾಬ್ದಾರಿ ಜತೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಗುರುತಿಸಿಕೊಂಡು ಸಾಧನೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಸದುಪಯೋಗ ಮಾಡಿಕೊಳ್ಳಿ ಎಂದರು. ರೈತರ ಮೋರ್ಚ ಗ್ರಾಮಾಂತರ ಜಿಲ್ಲಾಧ್ಯಕ್ಷ ಬೃಂಗೇಶ್, ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗವೇಣಿ, ತಾಲೂಕು ಅಧ್ಯಕ್ಷೆ ಮಂಜುಳಾ ಸುರೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್, ನಗರ ಅಧ್ಯಕ್ಷ ಕೇಶವ್, ಮಹಿಳಾ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಶೀಲಾ, ವಸಂತ ಖಜಾಂಚಿ, ಶೋಭಾಮಣಿ, ಮುಖಂಡ ಎಂ.ಎಂ.ಗೌಡ, ರಾಜಮ್ಮಪ್ರಕಾಶ್, ಸೌಮ್ಯಾ, ವೇದಾವತಿ, ಮಂಜುಳಾ, ಸೋಂಪುರ ಮಂಜುಳಾ, ಲತಾ, ತ್ಯಾಮಗೊಂಡ್ಲು ಮಂಜುಳಾ, ಭಾರತಿ, ಲಕ್ಷ್ಮೀ, ಗೀತಾ, ಶಾರದಾ, ನೀಲಮ್ಮ,
ತೇಜಸ್ವಿನಿ, ಪ್ರಮಿಳಾ, ಸುಮಾ, ಪ್ರೇಮಾ ಇದ್ದರು.
ಸಾಧಕಿಯರಿಗೆ ಸನ್ಮಾನ
ಸಾರ್ವಜನಿಕ ಆಸ್ಪತ್ರೆ ವೈದ್ಯೆ ಮಂಜುಳಾ, ಸಂಗೀತ ಶಿಕ್ಷಕಿ ಅಂಬಿಕಾ, ಶಿಕ್ಷಕಿ ಶೈಲಜಾ, ರೈತ ಮಹಿಳೆ ಉಮಾದೇವಿ, ಪೊಲೀಸ್ ಇಲಾಖೆಯ ಜಯಂತಿ, ಪತ್ರಕರ್ತೆ ಸುಮಿತ್ರಾ ದೇವಿ, ಜಯಲಕ್ಷ್ಮೀ, ಯೋಗ ಶಿಕ್ಷಕಿ ಚಂದ್ರಕಲಾ, ಸಮಾಜ ಸೇವಕಿ ಸುಮಿತ್ರಾ, ನಳಿನಿ, ಜ್ಯೋತಿ ಹಾಗೂ ಭಾರತ್ ಸ್ಕೌಟ್ಸ್ ಗೈಡ್‌ನ ರಕ್ಷಿತಾ ಅವರನ್ನು ಸನ್ಮಾನಿಸಲಾಯಿತು.