

ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ಈಗಾಗಲೇ ಐಎಸ್‍ಡಿ(ಆಂತರಿಕ ಭದ್ರತಾ ವಿಭಾಗ) ವಿಚಾರಣೆ ಎದುರಿಸಿರುವ ನಟ ಲೂಸ್ ಮಾದ ಯೋಗಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಮೂರು ದಿನಗಳ ಹಿಂದೆ ಗಿರಿನಗರದ ಟಾಟಾ ಪ್ರಮೋಟ್ ಅಪಾರ್ಟ್ಮೆಂಟ್ನಲ್ಲಿ ಪಾರ್ಟಿ ಮಾಡುತ್ತ ಅಕ್ಕಪಕ್ಕದ ಅಪಾರ್ಟ್ಮೆಂಟ್ ನವರಿಗೆ ಕಿರಿಕಿರಿ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿರಿ ‘ಪ್ರಶಾಂತ್ ಸಂಬರಗಿ ನನ್ನ ಜತೆಗೂ ಪಾರ್ಟಿಗಳಿಗೆ ಬಂದಿದ್ದ, ಜತೆಗೊಬ್ಬ ನಟಿಯನ್ನೂ ಕರೆತರುತ್ತಿದ್ದ’
ಕೂಡಲೇ ಸ್ಥಳಕ್ಕೆ ಬಂದ ಗಿರಿನಗರ ಬೀಟ್ ಪೊಲೀಸರು, ಪಾರ್ಟಿ ಮಾಡುವಾಗ ಅಕ್ಕಪಕ್ಕದ ಮನೆಯವರಿಗೆ ತೊಂದರೆ ಮಾಡದಂತೆ ವಾರ್ನಿಂಗ್ ಕೊಟ್ಟು ಹೋಗಿದ್ದಾರೆ.