ಕಣ್ಮನ ಸೆಳೆದ ಶರ್ಯತ್ತು, ಶ್ವಾನ ಪ್ರದರ್ಶನ

16Ainapur1
Published on

ಐನಾಪುರ: ಮನೆ ಕಾಯುವ ಕಾವಲುಗಾರ, ನಂಬಿಗಸ್ಥ ಪ್ರಾಣಿಯಾಗಿರುವ ನಾಯಿ ರೈತನ ಮಿತ್ರವಾಗಿದೆ ಎಂದು ಪಪಂ ಸದಸ್ಯ ಪ್ರವೀಣ ಗಾಣಿಗೇರ ಹೇಳಿದರು.

ಐನಾಪುರ ಪಟ್ಟಣದ 55ನೇ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಏರ್ಪಡಿಸಿದ್ಧ ಜೋಡು ಕುದುರೆ ಗಾಡಿ ಶರ್ಯತ್ತು ಮತ್ತು ವಿವಿಧ ಬಗೆಯ ಶ್ವಾನಗಳ ಪ್ರದರ್ಶನ ಸಮಾರಂಭದಲ್ಲಿ ಮಾತನಾಡಿ, ಸ್ಪರ್ಧೆಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ. ಭಕ್ತರಿಗೆ ತೊಂದರೆಯಾಗದಂತೆ ಸಹಕರಿಸಬೇಕು ಎಂದರು.

ಜೋಡು ಕುದುರೆ ಗಾಡಿ ಶರ್ಯತ್ತಿನಲ್ಲಿ ಕರ್ನಾಟಕ, ಮಹಾರಾಷ್ಟ್ರದ ವಿವಿಧ ಗ್ರಾಮಗಳ ಇಪ್ಪತ್ತೈದಕ್ಕೂ ಅಧಿಕ ಕುದುರೆ ಗಾಡಿಗಳು ಭಾಗವಹಿಸಿದ್ದವು. ಅವುಗಳಲ್ಲಿ ಮಹಾರಾಷ್ಟ್ರದ ಶೇಡಶಾಳ ಗ್ರಾಮದ ಲಕ್ಷ್ಮಣ ನಾಯಿಕ ಅವರ ಜೋಡು ಕುದುರೆ ಪ್ರಥಮ ಸ್ಥಾನದೊಂದಿಗೆ 15 ಸಾವಿರ ರೂ. ಬಹುಮಾನ ಪಡೆದವು. ಸಾಂಗಲಿಯ ಆಕಾಶ ಸಾಂಗಲಿ ಜೋಡು ಕುದುರೆ ದ್ವಿತೀಯ ಸ್ಥಾನದೊಂದಿಗೆ 10 ಸಾವಿರ ರೂ. ಬಹುಮಾನ, ಮಹಾರಾಷ್ಟ್ರದ ನಾಂದಣಿ ಗ್ರಾಮದ ಸನ್ನಿ ಉಳ್ಳಾಗಡ್ಡಿ ಅವರ ಜೋಡು ಕುದುರೆ ತೃತೀಯ ಸ್ಥಾನದೊಂದಿಗೆ 5 ಸಾವಿರ ರೂ. ಬಹುಮಾನ, ಕಾಗವಾಡ ತಾಲೂಕಿನ ಉಗಾರ ಪಟ್ಟಣದ ರೋಶಿತ ಶಿಂಧೆ ಜೋಡು ಕುದುರೆ 3 ಸಾವಿರ ರೂ. ಬಹುಮಾನದೊಂದಿಗೆ ಚತುರ್ಥ ಸ್ಥಾನ ಪಡೆದವು.

ಗಮನಸೆಳೆದ ಶ್ವಾನ ಪ್ರದರ್ಶನ: ಜಾತ್ರೆ ನಿಮಿತ್ತ ಹಮ್ಮಿಕೊಂಡಿರುವ ಶ್ವಾನ ಪ್ರದರ್ಶನದಲ್ಲಿ 50ಕ್ಕೂ ಅಧಿಕ ತಳಿಯ ನಾಯಿಗಳು ಪಾಲ್ಗೊಂಡಿದ್ದವು. ರಯಾಟ್ ವೀಲರ್, ಲೆಬ್ರಡಾರ್, ಡಾಬರ್‌ಮನ್, ಪಿಟ್‌ಬುಲ್, ಡ್ಯಾಶ್ ಹುಂಡ, ಪೊಮೋರಿಯನ್ ಸೇರಿ ವಿವಿಧ ವಿದೇಶಿ ತಳಿಗಳ ನಾಯಿಗಳ ಜತೆಗೆ ದೇಶಿ ತಳಿಯ ಮುಧೋಳ ನಾಯಿಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಸಂಜಯ ಪಾಟೀಲರ ಡಾಬರ್ ಮನ್ ನಾಯಿ ಪ್ರಥಮ ಸ್ಥಾನ, ಮುರಸಿದ್ಧ ಕರಿಗಾರರ ಶಿಟ್ ಜೂ ಶ್ವಾನ ದ್ವಿತೀಯ, ವಿಶ್ವಾ ನಿಡೋಣಿಯ ರಾಟ್ ವಿಲ್ಹರ್ ತೃತೀಯ, ಮುದುಕಪ್ಪ ಬಂಡಿಗಣಿಯ ಲೇಬ್ರಾಡರ್ ರೇಟ್ರೀವಾ ಚತುರ್ಥ ಸ್ಥಾನ ಪಡೆದವು. ನಿರ್ಣಾಯಕರಾಗಿ ಆನಂದ ಪಾಟೀಲ, ಶ್ರೀಕಾಂತ ಗಣವಿ, ವಿನಯ ಸಂಗ್ರೊಳ್ಳಿ, ಅಭಿನಂದ ಪಾಟೀಲ, ಸಚಿನ ಸೌಂದಲಗಿ, ಡಿ ಜೆ ಕಾಂಬಳೆ, ಎಚ್.ಬಿ.ಸಣ್ಣಕ್ಕಿ ಇದ್ದರು.

ಶರ್ಯತ್ತು ವಿಜೇತರಿಗೆ ಅರುಣ ಗಾಣಿಗೇರ, ಸಂಜಯ ಕೂಚನೂರೆ, ಪ್ರವೀಣ ಗಾಣಿಗೇರ, ಸಂಜಯ ಬಿರಡಿ, ಸುರೇಶ ಅಡಿಶೇರಿ, ಸದಾಶಿವ ಗಾಣಿಗೇರ, ರಾಹುಲ ಬಣಜವಾಡ, ಸಂದೀಪ ಮಾನಗಾಂವೆ, ಅನಿಲ ಸತ್ತಿ, ಯಶವಂತ ಪಾಟೀಲ, ಸತೀಶ ಕುಸುನಾಳೆ ಅವರು ಪ್ರಶಸ್ತಿ ಪಡೆದರು. 11-1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net