

ಮುಳಬಾಗಿಲು: ಸ್ಥಳಿಯ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೂ ಮಹಿಳೆಯರು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯರಿದ್ದರೆ ಸಮಾಜ ಎಂಬುದನ್ನು ಸಾರಿರುವ ಭಾರತೀಯ ಸಂಸತಿ ಪರಂಪರೆಯಲ್ಲಿ ಮಹಿಳೆಗೆ ಪೂಜ್ಯನಿಯ ಸ್ಥಾನ ನೀಡಲಾಗಿದೆ ಎಂದು ಕೋಲಾರ ಶಾಸಕ ಕೊತ್ತೂರು ಜಿ. ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಅಂತಾರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಾ.9ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಹಿಳೆಯರಿಗೆ ಗೌರವ ನೀಡುವ ಸಲುವಾಗಿ ಕಾಂಗ್ರೆಸ್ನಿಂದ ಹಮ್ಮಿಕೊಂಡಿರುವ ದೀರ್ಘ ಸುಮಂಗಲಿ ಭವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಮಾ.9ರಂದು
ಘಟ್ಟು ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಬೈರಕೂರು ಹೋಬಳಿ, ಮಾ.16ರಂದು ತಾಯಲೂರು ಹೋಬಳಿ, ಮಾ.23ರಂದು ಅವಣಿ ಹೋಬಳಿ, ಮಾ.28ರಂದು ದುಗ್ಗಸಂದ್ರ ಹೋಬಳಿ (ಕೊಲದೇವಿ), ಏ.14ರಂದು ಕಸಬಾ ಹಾಗೂ ನಗರ ವ್ಯಾಪ್ತಿಯ ಕಪಲಮಡುಗು ಎಂ.ಜಿ.ಮಾರ್ಕೆಟ್ನಲ್ಲಿ ಏರ್ಪಡಿಸಲಾಗುತ್ತಿದೆ. ಸ್ಥಳಿಯ ಮುಖಂಡರು ಕಾರ್ಯಕ್ರಮ ಸಂಪೂರ್ಣವಾಗಿ ಯಶಸ್ವಿಯಾಗಲು ಶ್ರಮಿಸಬೇಕು ಎಂದು ತಿಳಿಸಿದರು.
ಮುಖಂಡ ವಿ.ಆದಿನಾರಾಯಣ ಮಾತನಾಡಿ, ಕೋಲಾರ ಶಾಸಕ ಕೊತ್ತೂರು ಜಿ. ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ನಿಂದ ದೀರ್ಘ ಸುಮಂಗಲಿ ಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಂಪೂರ್ಣ ಯಶಸ್ವಿಗೆ ಕ್ರಮವಹಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದು. ಪಾತೀತ, ಜಾತ್ಯಾತಿತವಾಗಿ ಎಲ್ಲ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದರು.ಅವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಸಿ. ನೀಲಕಂಠೇಗೌಡ ಮಾತನಾಡಿ, ವಿಶೇಷವಾಗಿ ಮಹಿಳೆಯರಿಗೆ ಗೌರವ ನೀಡುವ ಕಾರ್ಯಕ್ರಮ ಇದಾಗಿದ್ದು, ಸಂಪೂರ್ಣ ಅನುಷ್ಠಾನಗೊಳಿಸಲು ಈಗಾಗಲೇ ಹಲವು ಬಾರಿ ಸಭೆಗಳನ್ನು ಏರ್ಪಡಿಸಲಾಗಿದೆ ಎಂದರು. ಮುಖಂಡರಾದ ಗುಮ್ಮಕಲ್ ರಾಮರೆಡ್ಡಿ, ಎನ್.ವೆಂಕಟೇಶಗೌಡ, ಕಾರ್ಗಿಲ್ ವೆಂಕಟೇಶ್, ಕೆ.ಎನ್.ಉಮಾಶಂಕರ್, ಗೊಲ್ಲಹಳ್ಳಿ ಪಿ.ವೆಂಕಟೇಶ್, ರಾಮಾಂಜಿ, ರಂಗಸ್ವಾಮಿ, ಚಲಪತಿ, ಗುಮ್ಮಕಲ್ ಶ್ರೀನಿವಾಸ್ ಇದ್ದರು.
ಜಾಗೃತಿ ಮೂಡಿಸಿ
ಕಾರ್ಯಕರ್ತರು ಮನೆ ಮನೆಗೂ ಭೇಟಿ ನೀಡಿ ಜಾಗೃತಿ ಮೂಡಿಸುವುದರ ಜತೆಗೆಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಮುಂಬರುವ ತಾಪಂ, ಜಿಪಂ, ಗ್ರಾಪಂ ಹಾಗೂ ನಗರಸಭೆಯ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲು ಈಗಿನಿಂದಲೇ ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ಕೊತ್ತೂರು ಮಂಜುನಾಥ್ ತಿಳಿಸಿದರು. ಎರಡು ತಿಂಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಏರ್ಪಡಿಸಿ ಸಿಎಂ, ಡಿಸಿಎಂ ಸೇರಿ ಇತರೆ ಇಲಾಖೆಗಳ ಸಚಿವರನ್ನು ಆಹ್ವಾನಿಸಿ ಕಾರ್ಯಕ್ರಮಗಳಉಸ್ತುವಾರಿಯನ್ನು ನಾನು ಮತ್ತು ಅನಿಲ್ಕುಮಾರ್ ವಹಿಸುತ್ತೇವೆ ಎಂದರು.