ಸುದೀರ್ಘ ಹೋರಾಟದ ಫಲ ರಾಮಮಂದಿರ

2
ರಾಯನಾಗ ಪಟ್ಟಣದ ಝೇಂಡಾ ಕಟ್ಟೆ ಹತ್ತಿರ ಹಮ್ಮಿಕೊಂಡಿದ್ದ ರಾಮೋತ್ಸವ ಕಾರ್ಯಕ್ರಮದಲ್ಲಿ ಪ್ರಮೋದ ಮುತಾಲಿಕ ಮಾತನಾಡಿದರು. ಜಯದೀಪ ದೇಸಾಯಿ, ಶಿವು ಬಂತೆ, ಪ್ರತಾಪ ಹೊಸಮನಿ, ಸಂತೋಷ ಮೇತ್ರಿ, ಸುನೀಲ ಕುಲಗುಡೆ, ಅಮಿತ ಹೊಂಕಳೆ, ಉದಯ ಕುಂಬಾರ ಇತರರು ಇದ್ದರು.
Published on

ರಾಯಬಾಗ: ಸುದೀರ್ಘ ಹೋರಾಟದ ಲವಾಗಿ ಅಯ್ಯೋಧೆಯಲ್ಲಿ ರಾಮಮಂದಿರ ನಿರ್ಮಾಣಗೊಂಡಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.

ಪಟ್ಟಣದ ಝೇಂಡಾ ಕಟ್ಟೆ ಹತ್ತಿರ ಶ್ರೀರಾಮ ಸೇನೆ ಹಾಗೂ ವಿವಿಧ ಹಿಂದುಪರ ಸಂಘಟನೆಗಳಿಂದ ಸೋಮವಾರ ಹಮ್ಮಿಕೊಂಡಿದ್ದ ರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀರಾಮ ಯಾವುದೇ ಪಕ್ಷ, ಸಂಘಟನೆಗೆ ಸೀಮಿತನಲ್ಲ. ಅಯೋಧ್ಯೆಯ ಶ್ರೀರಾಮನು ದೇಶದ 140 ಕೋಟಿ ಹಿಂದುಗಳ ಆರಾಧ್ಯ ದೇವನಾಗಿದ್ದಾನೆ. ಇಂದು ವಿಶ್ವವೇ ಭಾರತ ದೇಶದೆಡೆ ನೋಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಜಯದೀಪ ದೇಸಾಯಿ, ಶಿವು ಬಂತೆ, ಪ್ರತಾಪ ಹೊಸಮನಿ, ಸಂತೋಷ ಮೇತ್ರಿ, ಸುನೀಲ ಕುಲಗುಡೆ, ಅಮಿತ ಹೊಂಕಳೆ, ಉದಯ ಕುಂಬಾರ ಇತರರು ಇದ್ದರು.

ಪಟ್ಟಣದ ಗಣೇಶ ಮಂದಿರ, ಸಾಯಿ ಮಂದಿರ, ಹನುಮಾನ ಮಂದಿರ ಸೇರಿ ಎಲ್ಲೆಡೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರಿಗೆ ಅನ್ನಪ್ರಸಾದ ಏರ್ಪಡಿಸಲಾಗಿತ್ತು.ಪಟ್ಟಣವು ಸಂಪೂರ್ಣ ಕೇಸರಿ ಧ್ವಜಗಳಿಂದ, ತಳಿರು-ತೋರಣಗಳಿಂದ ಕಂಗೊಳಿಸುತ್ತಿತ್ತು. ಸಂಜೆ ಪಟ್ಟಣದ ಎಲ್ಲ ದೇವಸ್ಥಾನಗಳಲ್ಲಿ ದೀಪೋತ್ಸವ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net