

ಕನಕಗಿರಿ: ಒನಕೆ ಹಿಡಿದು ಏಕಾಂಗಿಯಾಗಿ ಶತ್ರು ಸೈನ್ಯವನ್ನು ನಾಶ ಮಾಡಿ ವೀರ ಮರಣ ಹೊಂದಿದ ಓಬವ್ವ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಗ್ರೇಡ್-2 ತಹಸೀಲ್ದಾರ್ ವಿ.ಎಚ್.ಹೊರಪೇಟಿ ಹೇಳಿದರು.
ಇದನ್ನೂ ಓದಿ:ಮಾತಿನ ಒನಕೆ ಕುಟ್ಟಿದ ಮುಖಂಡರು
ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೋರ್ಚ್‌ಗೀಸರ ಸದ್ದಡಗಿಸಿದ ರಾಣಿ ಅಬ್ಬಕ್ಕದೇವಿ, ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ಚನ್ನಮ್ಮ, ಔರಂಗಜೇಬನಿಗೆ ಹೆದರದ ಕೆಳದಿ ಚನ್ನಮ್ಮ ಇತರ ವೀರ ವನಿತೆಯರ ಸಾಲಿನಲ್ಲಿ ಚಿತ್ರದುರ್ಗದ ಓಬವ್ವ ಸೇರುತ್ತಾರೆ.
ಹೈದರಅಲಿ ಸೈನಿಕರು ಚಿತ್ರದುರ್ಗದ ಕೋಟೆಗೆ ದಾಳಿ ಮಾಡಿದಾಗ ಒನಕೆಯಿಂದ ನುಸುಳುಕೋರರನ್ನು ಕೊಂದು ವೀರಮರಣ ಒಪ್ಪುತ್ತಾರೆ. ಇದಕ್ಕೆ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರ ಸಾಕ್ಷಿಯಂತಿದೆ. ಈ ಮೂಲಕ ಓಬವ್ವನ ಶೌರ್ಯ ಜಗತ್ತಿಗೆ ಪ್ರಚಾರವಾಯಿತು. ಅದಕ್ಕಾಗಿ ಚಿತ್ರದುರ್ಗದ ಒಂದು ಕ್ರೀಡಾಂಗಣಕ್ಕೆ ವೀರ ವನಿತೆ ಒನಕೆ ಓಬವ್ವ ಹೆಸರನ್ನಿಡಲಾಗಿದೆ ಎಂದು ತಿಳಿಸಿದರು.
ಪಪಂ ಉಪಾಧ್ಯಕ್ಷ ಕಂಠಿರಂಗ ನಾಯಕ, ಸದಸ್ಯರಾದ ಹನುಮಂತ ಬಸರಿಗಿಡ, ಶೇಷಪ್ಪ ಪೂಜಾರ, ಸಂಗಪ್ಪ ಸಜ್ಜನ್, ಹನುಮೇಶ ಹಡಪದ, ಶಾಂತಪ್ಪ ಬಸರಿಗಿಡ, ಪ್ರಮುಖರಾದ ವೀರೇಶ ಸಮಗಂಡಿ, ಗಂಗಾಧರಸ್ವಾಮಿ ಕಲುಬಾಗಿಲಮಠ, ಸಣ್ಣ ಕನಕಪ್ಪ, ಕನಕಪ್ಪ ಛಲವಾದಿ, ಮಹಾಂತೇಶ ಸಜ್ಜನ್, ಸುಭಾಷ್ ಕಂದಕೂರು, ನಿಂಗಪ್ಪ, ವೆಂಕಟೇಶ ನಿರ್ಲೂಟಿ, ನಾಗೇಶ ಬಡಿಗೇರ ಇತರರಿದ್ದರು.