

-ತೆರಿಗೆದಾರರಿಗೆ, ಪ್ರಾಮಾಣಿಕರಿಗೆ ಗೌರವ ಇಲ್ಲ
ಬೆಳಗಾವಿ: ನಮ್ಮ ದೇಶ ಅಭಿವೃದ್ಧಿಯಲ್ಲಿ ಹಿಂದುಳಿಯಲು ಭ್ರಷ್ಟಾಚಾರ ವ್ಯವಸ್ಥೆ ವೇಪ್ರಮುಖ ಕಾರಣವಾಗಿದೆ ಎಂದು ನ್ಯಾಯಾಧೀಶ ಪಿ.ಮುರಳಿ ಮೋಹನ ರೆಡ್ಡಿ ಬೇಸರ ವ್ಯಕ್ತಪಡಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಲೋಕಾಯುಕ್ತ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ದ ಜಾಗೃತ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ವ್ಯವಸ್ಥೆಯಿಂದಾಗಿ ಅಧಿಕಾರಿಗಳು ಜನರ ನಂಬಿಕೆಕಳೆದುಕೊಳ್ಳುತ್ತಿದ್ದಾರೆ. ನಿಗದಿತಿ ಸಮಯದಲ್ಲಿ ವಿಲೇವಾರಿ ಆಗದಿರುವುದು ಕೂಡ ಸಮಸ್ಯೆಗೆಮೂಲ ಕಾರಣ ಎನ್ನಬಹುದು ಎಂದರು.
ಪ್ರಾಮಾಣಿಕ ವಾಗಿ ತೆರಿಗೆ ಕಟ್ಟುವವರಿಗೆ ಸರ್ಕಾರಿ ಕಚೇರಿಗಳ ವ್ಯವಸ್ಥೆಯಲ್ಲಿ ಗೌರವ ಇಲ್ಲದಂತಾಗಿದೆ. ಭ್ರಷ್ಟಾಚಾರ ವಿರುದ್ಧ ಹೋರಾಡುವವರಿಗೆ ರಕ್ಷಣೆ ಇಲ್ಲ. ಸರ್ಕಾರಿ ನೌಕರಿ ಸೇರುವ ಮುನ್ನವೇ ಅಸ್ತಿ ಸಂಪಾದನೆ ಮಾಡಬೇಕು ಎಂಬ ಮನೋಪ್ರವೃತ್ತಿಯಿಂದು ಕೆಲವರು ಬರುತ್ತಿರುವುದು ಅಪಾಯಕಾರಿಯಾಗಿದೆ ಎಂದರು.