

ಧಾರವಾಡ: ವೀರಶೈವ ಧರ್ಮದ ಶ್ರೀ ಜಗದ್ಗುರು ಪಂಚಪೀಠಗಳ ಗುರುಪರಂಪರೆಯ ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದಲ್ಲಿ ಪವಿತ್ರ ಶ್ರಾವಣ ಮಾಸದ ಅಂಗವಾಗಿ ಶ್ರೀಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿAಗ ಶಿವಾಚಾರ್ಯ ಸ್ವಾಮೀಜಿ ಲೋಕಕಲ್ಯಾಣ ಸಂಕಲ್ಪದೊAದಿಗೆ ಆ. ೧೭ರಿಂದ ತಿಂಗಳ ಕಾಲ ಪರ್ಯಂತ ರುದ್ರಾಭಿಷೇಕ ಸಮೇತ ಇಷ್ಟಲಿಂಗ ಮಹಾಪೂಜೆ ನಡೆಸುವರು.
ಪ್ರಾತಃಕಾಲ ೮ ಗಂಟೆಗೆ ಇಷ್ಟಲಿಂಗ ಮಹಾಪೂಜೆ ಆರಂಭವಾಗಲಿದೆ. ಶಿವಾಷ್ಟೋತ್ತರದೊಂದಿಗೆ ನೂರೊಂದು ಬಿಲ್ವಾರ್ಚನೆ ಹಾಗೂ ಪಂಚ ವಿಧದ ಆರತಿಗಳ ವಿಶೇಷ ಪೂಜಾ ಕೈಂಕರ್ಯ ಜರುಗಲಿವೆ. ನಂತರ ಭಕ್ತಗಣದಿಂದ ಶ್ರೀಗಳ ಪಾದಪೂಜೆ ನೆರವೇರುವುದು.