

ಲೋಕಾಪುರ: ಲೋಕೇಶ್ವರ ಜಾತ್ರೆ ಅದ್ದೂರಿ ಆಚರಣೆಗೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಗಣಿ ಉದ್ಯಮಿ ಎಸ್.ಎನ್. ಹಿರೇಮಠ ಹೇಳಿದರು.
ಪಟ್ಟಣದ ಲೋಕೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಶಿವರಾತ್ರಿ ಮುಗಿದ ಮರುದಿವಸ ರಥೋತ್ಸವ ಜರುಗುವುದು. ಈ ವರ್ಷವೂ ಅದೇ ಪ್ರಕಾರ ರಥೋತ್ಸವ ನಡೆಸಲಾಗುವುದು ಎಂದರು.
ಜಾತ್ರಾ ಉತ್ಸವದ ಸದಸ್ಯ ಪ್ರಕಾಶ ಚುಳಕಿ ಮಾತನಾಡಿ, ೆ.26 ಮಹಾಶಿವರಾತ್ರಿ, ೆ.27ರಂದು ರಥೋತ್ಸವ ಜರುಗಲಿದೆ ಎಂದರು.
ಷಣ್ಮೂಖಪ್ಪ ಕೋಲ್ಹಾರ, ವಿ.ಎಂ.ತೆಗ್ಗಿ, ಶಿವಪ್ಪ ಚೌಧರಿ, ಬಸವರಾಜ ಕಾತರಕಿ, ಗೋವಿಂದಪ್ಪ ಕೌಲಗಿ, ಸದಾಶಿವ ಉದಪುಡಿ, ಈಶ್ವರ ಹವಳಖೋಡ, ಮುದಕಪ್ಪ ಚಿಗರಡ್ಡಿ, ಸಂಗಪ್ಪ ಬಟಕುರ್ಕಿ, ಹೊಳಬಸು ದಂಡಿನ, ಭೀಮನಗೌಡ ಪಾಟೀಲ, ಸಂಕಪ್ಪ ಗಂಗಣ್ಣವರ, ಅರುಣ ನರಗುಂದ, ಬಸವರಾಜ ಪಂಚಕಟ್ಟಿಮಠ, ಪ್ರವೀಣ ಗಂಗಣ್ಣವರ, ಪಿಕೆಪಿಎಸ್ ಸದಸ್ಯ ಚನ್ನಯ್ಯ ಗಣಾಚಾರಿ, ಮುತ್ತಪ್ಪ ಗಡ್ಡದವರ, ತುಳಜಪ್ಪ ಮುದ್ದಾಪುರ, ಸಂಗಮೇಶ ಪಲ್ಲೇದ, ವಿನಾಯಕ ಉದಪುಡಿ, ಕೃಷ್ಣ ಭಜಂತ್ರಿ, ಭೀಮಶಿ ಅವರಾದಿ ಇದ್ದರು.