ಬಳ್ಳಾರಿ : ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿ.ಲೋಕೇಶ್ ಅ. 21ರಿಂದ 26ರವರೆಗೆ ಇಂಡೋನೇಷ್ಯಾದಲ್ಲಿ ಜರುಗಲಿರುವ ಐಐಸಿಎಂಎ-2025 ಅಂತರಾಷ್ಟ್ರೀಯ ಸಮ್ಮೇಳನದ ಮುಖ್ಯ ಭಾಷಣಕಾರರಾಗಿ ಭಾಗವಹಿಸಲು ವಿದೇಶ ಪ್ರಯಾಣ ಮಾಡಲಿದ್ದಾರೆ.
ಪ್ರತಿಷ್ಠಿತ 37ನೇ ಆವೃತ್ತಿಯ ಇಂಡೊ ಎಂಎಸ್ ಅಂತರಾಷ್ಟ್ರೀಯ ಸಮ್ಮೇಳನವು ಇಂಡೋನೇಷ್ಯಾದ ಈಸ್ಟ್ ಜಾವಾದಲ್ಲಿರುವ ಜಂಬೆರ್ ವಿಶ್ವವಿದ್ಯಾಲಯದಲ್ಲಿ ಈ ಬಾರಿ ಆಯೋಜಿಸಲಾಗಿದೆ. ಜಂಬೆರ್ ವಿಶ್ವವಿದ್ಯಾಲಯದ ಜಾಂಗ್‌ಜಿಯಾನ್ ಮೆಥಮೆಟಿಕಲ್ ಸೊಸೈಟಿ ಮತ್ತು ಸಿಜಿಎಎನ್‌ಟಿ ರಿಸರ್ಚ ಗ್ರೂಪ್ ಸಹಭಾಗಿತ್ವದಲ್ಲಿ ಪ್ರತಿವರ್ಷ ಸಮ್ಮೇಳನವನ್ನು ಆಯೋಜಿಸುತ್ತದೆ.