ಎಸ್‌ಐ ಲೋಕೇಶ್‌ಗೆ ಬೀಳ್ಕೊಡುಗೆ

Lokesh
Published on

ಮಡಿಕೇರಿ:

ಮಡಿಕೇರಿ ನಗರ ಪೋಲೀಸ್ ಠಾಣೆಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಮಂಡ್ಯ ಜಿಲ್ಲೆಯ ಮಳವಳ್ಳಿ ಹುಲಗೂರು ಠಾಣೆಗೆ ವರ್ಗಾವಣೆಯಾಗಿರುವ ಲೋಕೇಶ್ ಅವರನ್ನು ನಗರದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಸಾರ್ವಜನಿಕರು ಭಾನುವಾರ ಆತ್ಮೀಯವಾಗಿ ಬೀಳ್ಕೊಟ್ಟರು.

ನಗರ ಠಾಣೆಯಲ್ಲಿ ಲೋಕೇಶ್ ಅವರನ್ನು ಸನ್ಮಾನಿಸಿ ಗೌರವಿಸಿದ ಪ್ರಮುಖರು ಮುಂದಿನ ವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾತನಾಡಿ ಲೋಕೇಶ್ ಅವರು 2023 ರÀಲ್ಲಿ ಮಡಿಕೇರಿ ನಗರ ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡು ಜನಸ್ನೇಹಿ ಅಧಿಕಾರಿಯಾಗಿ ದಕ್ಷತೆಯಿಂದ ಸೇವೆ ಸಲ್ಲಿಸಿದ್ದಾರೆ.

ವಿಶ್ವವಿಖ್ಯಾತ ಮಡಿಕೇರಿ ದಸರಾ ಸೇರಿದಂತೆ ಅನೇಕ ಜನದಟ್ಟಣೆಯ ಕಾರ್ಯಕ್ರಮಗಳ ಸಂದರ್ಭ ಲೋಕೇಶ್ ಹಾಗೂ ಅವರ ಸಿಬ್ಬಂದಿ ತಂಡ ಉತ್ತಮ ರೀತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಆದ್ದರಿಂದ ಅವರನ್ನು ಆತ್ಮೀಯವಾಗಿ ಬೀಳ್ಕೋಡುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.

ವೃತ್ತ ನಿರೀಕ್ಷಕ ಪಿ.ಕೆ. ರಾಜು ಮಾತನಾಡಿ ಸಾಧಾರಣವಾಗಿ ಅಧಿಕಾರ ವಹಿಸಿಕೊಂಡ ಸಂದರ್ಭ ಅಧಿಕಾರಿಗಳು ಅಭಿನಂದನೆಗಳಿಗೆ ಭಾಜನರಾಗುತ್ತಾರೆ. ಆದರೆ ಅಪರೂಪಕ್ಕೆ ಎಂಬAತೆ ಕರ್ತವ್ಯದ ವೇಳೆ ಜನರ ಮನಸ್ಸು ಗೆದ್ದು ವರ್ಗಾವಣೆಯಾಗುವ ಹಂತದಲ್ಲಿ ಕೆಲವು ಅಧಿಕಾರಿಗಳು ಗೌರವ ಪಡೆಯುತ್ತಾರೆ. ಅಂತಹ ಗೌರವಕ್ಕೆ ಲೋಕೇಶ್ ಅವರು ಪಾತ್ರರಾಗಿರುವುದು ಶ್ಲಾಘನೀಯವೆಂದರು.

ಅಖಿಲ ಭಾರತ ತುಳು ಒಕ್ಕೂಟದ ನಿರ್ದೇಶಕÀ ಪ್ರಭು ರೈ, ಓಂಕಾರೇಶ್ವರ ದೇವಾಲಯ ಸಮಿತಿಯ ಮಾಜಿ ಅಧ್ಯಕ್ಷ ಪುಲಿಯಂಡ ಕೆ. ಜಗದೀಶ್, ಮಡಿಕೇರಿ ನಗರ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವAಡ ನಾಚಪ್ಪ. ಮಡಿಕೇರಿ ತಾಲೂಕು ಬ್ರಾಹ್ಮಣರ ಸಂಘದ ಮಾಜಿ ಕಾರ್ಯದರ್ಶಿ ವಸಂತ್ ಭಟ್ ಮತ್ತಿತರರು ಹಾಜರಿದ್ದು ಲೋಕೇಶ್ ಅವರಿಗೆ ಶುಭ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net