ಪೊಲೀಸ್ ಲೋಕೇಶ್ ಅಂತ್ಯಕ್ರಿಯೆ

Lokesh
Published on

ಮಡಿಕೇರಿ:

ಸಮೀಪದ ಕಾನ್‌ಬೈಲು ಗ್ರಾಮದಲ್ಲಿ ಮರದಿಂದ ಬಿದ್ದು ಪೊಲೀಸ್ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಸುಮಾರು ೧೫ ವರ್ಷ ಕಾಲ ಗನ್‌ಮ್ಯಾನ್ ಆಗಿ ಸೇವೆ ಸಲ್ಲಿಸಿದ ಲೋಕೇಶ್ (೪೦) ಮೃತ ವ್ಯಕ್ತಿ.
ತೋಟಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದ ಲೋಕೇಶ್ ತಮ್ಮ ತೋಟದಲ್ಲಿ ಮಾವಿನ ಮರಕ್ಕೆ ಕಸಿಕಟ್ಟಲು ಮರ ಹತ್ತಿದ್ದ ಸಂದರ್ಭ ಲೋ ಬಿಪಿ ಆಗಿ ಮರದಿಂದ ಕಾಂಕ್ರೀಟ್ ರಸ್ತೆ ಬಿದ್ದು ಸಾವನ್ನಪ್ಪಿದ್ದಾರೆ.

ಮಾಜಿ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಮೃತದೇಹವಿದ್ದ ಮಡಿಕೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಪೊಲೀಸ್ ಅಧಿಕಾರಿಗಳು ಹಾಗೂ ಸ್ನೇಹಿತರು ಆಸ್ಪತ್ರೆಗೆ ಭೇಟಿ ನೀಡಿ ಮೃತ ಲೋಕೇಶ್ ಅಂತಿಮ ದರ್ಶನ ಪಡೆದರು.
ಲೋಕೇಶ್ ಅವರಿಗೆ ಪತ್ನಿ ಮತ್ತು ಮಗಳು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net