ಲೋಕಾಯುಕ್ತ ಬಲೆಗೆ ಬಿದ್ಧ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ನಿರೀಕ್ಷಕ

Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಹೊರಗುತ್ತಿಗೆ ಚಾಲಕರ ಸಹಕಾರ ಸಂಘದ ನೋಂದಣಿಗೆ ಅರ್ಜಿದಾರರಿಂದ ಶುಕ್ರವಾರ ೮ ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ನಿರೀಕ್ಷಕ ಎಸ್. ಮಂಜು ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಹೊರ ಗುತ್ತಿಗೆ ಆಧಾರದಲ್ಲಿ ವಾಹನ ಚಾಲಕರಾಗಿ ಕೆಲಸ ಮಾಡುತ್ತಿರುವ ಕುಂಜಿಲ ಗ್ರಾಮದ ಕಕ್ಕಬೆ ನಿವಾಸಿ ಪಿ.ಜಿ. ದೇವಯ್ಯ ಸೆ.೧೬ ರಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಹೊರಗುತ್ತಿಗೆ ಚಾಲಕರ ಸಂಘದ ನೋಂದಣಿಗೆ ಸೆ.೧೪ ರಂದು ಜಿಲ್ಲಾ ಸಹಕಾರ ಸಂಘದ ಕಚೇರಿಗೆ ತೆರಳಲಾಗಿತ್ತು. ಸಂಘದ ನೋಂದಣಿಗೆ ೮ ಸಾವಿರ ರೂ. ನೀಡಬೇಕೆಂದು ಎಸ್.ಮಂಜು ಲಂಚದ ಬೇಡಿಕೆ ಇಟ್ಟಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಎಂ.ಎಸ್. ಪವನ್‌ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್.ಮಂಜು ಬಳಿ ಅನಧಿಕೃತವಾಗಿ ಇಟ್ಟುಕೊಂಡಿದ್ದ ೨೨,೫೪೦ ರೂ. ವಶ ಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಮಡಿಕೇರಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಲೋಕೇಶ್, ಸಿಬ್ಬಂದಿ ಟಿ.ಯು. ಲೋಕೇಶ್, ಟಿ.ಎಂ. ಮಂಜುನಾಥ್, ಎಚ್.ಎಸ್. ಪೃಥ್ವೀಶ್, ಎಂ.ಎಸ್. ಸಲಾವುದ್ದೀನ್, ಬಿ.ಎಸ್. ಅರುಣ್‌ಕುಮಾರ್ ರೈ, ಆರ್. ಶಶಿಕುಮಾರ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net