ಬಂಟ್ವಾಳ ಲೋಕಾಯುಕ್ತದಿಂದ 19 ದೂರು ಸ್ವೀಕಾರ

mng---14 june Lokayuktha
Published on

ಮಂಗಳೂರು: ಕಂದಾಯ, ಭೂ ದಾಖಲೆಗಳ ಇಲಾಖೆ, ಪುರಸಭೆ ಮೊದಲಾದವುಗಳಿಗೆ ಸಂಬಂಧಿಸಿ ಲೋಕಾಯುಕ್ತ ಇಲಾಖೆ ಅಧಿಕಾರಿಗಳು ಬುಧವಾರ 19 ದೂರುಗಳನ್ನು ಸ್ವೀಕರಿಸಿದರು.


ಕೆಲವು ದೂರುಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಗಿದ್ದು, ಬಾಕಿ ಉಳಿದ ದೂರುಗಳನ್ನು ಶೀಘ್ರದಲ್ಲೇ ಇತ್ಯರ್ಥಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


ಲೋಕಾಯುಕ್ತ ಎಸ್ಪಿ ಸಿ.ಎ.ಸೈಮನ್ ಅವರ ಉಪಸ್ಥಿತಿಯಲ್ಲಿ ತಹಶೀಲ್ದಾರ್ ಎಸ್.ಬಿ.ಕೂಡಲಗಿ, ಡಿವೈಎಸ್ಪಿಗಳಾದ ಕಲಾವತಿ ಕೆ., ಚೆಲ್ವರಾಜ್ ಹಾಗೂ ಅಮಾನುಲ್ಲಾ ಎ. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net