ತಪ್ಪೆಸಗಿದರೇ ಕ್ರಮ ಎದುರಿಸಲು ಸಿದ್ಧರಾಗಿ: ಲೋಕಾ ನ್ಯಾ. ಬಿ.ಎಸ್​. ಪಾಟೀಲ

20230707_165143
Published on

ವಿಜಯವಾಣಿ ಸುದ್ದಿಜಾಲ ಗದಗ
ತಮ್ಮ ಕಾರ್ಯವನ್ನು ನಿರ್ಲಸಿ ವಿಳಂಬ ಮಾಡಿದರೆ ಸರ್ಕಾರಿ ಅಧಿಕಾರಿಗಳನ್ನು ಶಿಕ್ಷಿಸಲು ಕಾನೂನಿನಲ್ಲಿ ಅವಕಾಶ ಇದೆ. ಲೋಕಾಯುಕ್ತ ಕಾಯಿದೆ ಮತ್ತು ಭ್ರಷ್ಟಾಚಾರ ನಿಷೇಧ ಕಾಯಿದೆಗಳ ಅಡಿ ನಿಮ್ಮನ್ನು ಆರೋಪಿಸ ಸ್ಥಾನದಲ್ಲಿ ನಿಲ್ಲಿಸಬಹುದು. ತಮ್ಮ ಕರ್ಯವನ್ನು ಸಮರ್ಪಕವಾಗಿ ನಿರ್ವಹಿಸಿ. ದೂರು ದಾಖಲಿಸುವುದಕ್ಕೆ ಎಡೆ ಮಾಡಿಕೊಡಬೇಡಿ ಎಂದು ಲೋಕಾಯುಕ್ತ ನ್ಯಾಯಮೂತಿರ್ ಬಿ.ಎಸ್​. ಪಾಟೀಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಪ್ರಮುಖವಾಗಿ ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆ, ಆಸ್ಪತ್ರೆಗಳಲ್ಲಿನ ಸೇವೆ ಸಮಸ್ಯೆ, ಗ್ರಾಮೀಣಾಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಸ್ಪತ್ರೆಗಳಲ್ಲಿ ವೈದ್ಯರು, ಉಪಕರಣಗಳಿದ್ದರೂ ರೋಗಿಗಳಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ. ಸರ್ಕಾರದಿಂದ ಮಾತ್ರ ವೆಚ್ಚ ಆಗುತ್ತಿದೆ ಎಂದು ಲೋಕಾಯುಕ್ತ ನ್ಯಾಯಮೂತಿರ್ ಬಿ.ಎಸ್​. ಪಾಟೀಲ ಕಳವಳ ವ್ಯಕ್ತಪಡಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಅಗತ್ಯ, ಔಷಧ ವಿತರಣೆ, ವೈದ್ಯರ ರೋಗಿಗಳ ಜತೆ ಸಮಾಲೋಚನೆ, ಖಾಲಿ ಹುದ್ದೆಗಳ ಭತಿರ್ ಕುರಿತು ಚಚಿರ್ಸಿದರಲ್ಲದೇ ಲೋಕಾಯುಕ್ತರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ವ್ಯವಸ್ಥೆ ಸುಧಾರಿಸಬೇಕು. ಇಲ್ಲವಾದರೆ ವೈದ್ಯಾಧಿಕಾರಿಗಳ ಮೇಲೆ ಕ್ರಮ ಖಂಡಿತ ಎಂದರು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳಿಗೆ ಪಾಠ ಮಾಡಿದ ಲೋಕಾಯುಕ್ತರು, ಸರ್ಕಾರದ ಬಯಲುಮುಕ್ತ ಬಹಿರ್ದೆಸೆ ಮಾಡಲು ಸಾಕಷ್ಟು ಅನುದಾನ ವಿನಿಯೋಗಿಸುತ್ತಿದೆ. ಆದರೆ, ಜಿಲ್ಲೆಯಲ್ಲಿ ಬಹಿರ್ದೆಸೆ ಮುಕ್ತ ಎಂದು ಘೋಷಿಸಿಕೊಂಡ ಹಳ್ಳಿಗಳಲ್ಲೂ ಬಹಿರ್ದೆಸೆ ಇನ್ನೂ ಚಾಲನೆಯಲ್ಲಿದೆ. ಗ್ರಾಮೀಣ ಜನರು ಮುಗ್ದರು. ನೀವು ಅವರಿಗೆ ತಿಳಿಸಿ ಹೇಳಿದರೆ ಕೇಳುತ್ತಾರೆ. ನೀವು ಅವರ ಜತೆ ಸೂಕ್ಷ$್ಮವಾಗಿ ವತಿರ್ಸಿದಂತೆ ಅವರು ನಿಮ್ಮ ಜತೆ ಉತ್ತಮ ಭಾಂದವ್ಯ ಹೊಂದುತ್ತಾರೆ. ಶೌಚಾಲಯ ಇಲ್ಲದ ಮನೆ, ಶೌಚಾಲಯ ಇದ್ದರೂ ಬಳಸದ ಮನೆಗಳನ್ನು ಗುರುತಿಸಿ ಅವರಿಗೆ ನೀವು ಎಚ್ಚರಿಕೆ ನೀಡಬೇಕು ಎಂದರು.

ಕಂದಾಯ ಇಲಾಖೆ:
ಖಾತಾ ಬದಲಾವಣೆ ಸೇರಿದಂತೆ ಹಲವು ದೂರುಗಳು ಕಂದಾಯ ಇಲಾಖೆ ಮೇಲೆ ತೂಗು ಕತ್ತಿಯಾಗಿ ಪರಿಣಮಿಸಿವೆ. ಕಂದಾಯ ಅಧಿಕಾರಿಗಳು ಅಜಿರ್ ವಿಲೇವಾರಿಗೆ ವಿಳಂಬ ನೀತಿ ಬೆಳಕಿಗೆ ಬಂದರೆ ಅವರ ಮೇಲೆ ಕ್ರಮ ಗ್ಯಾರಂಟಿ ಎಂದ ಅವರು, ನಿಮ್ಮಲ್ಲಿ ಎಷ್ಟು ಕೇಸ್​ಗಳು ಪೆಂಡಿಂಗ್​ ಇವೆ. ಎಷ್ಟು ಅವಧಿಯಲ್ಲಿ ವಿಲೇವಾರಿ ಮಾಡುತ್ತೀರಿ ಎಂಬುದು ಮಾಹಿತಿ ಕೊಡಿ ಎಂದು ಸೂಚಿದರು.

ಶೈಕ್ಷಣಿಕ ಇಲಾಖೆ:
ಲೋಕಾ ಅಧಿಕಾರಿಗಳಿಂದ ಜಿಲ್ಲೆಯಲ್ಲಿ ಎರಡು ಶಾಲೆಗಳಿಗೆ ಭೇಟಿ ನೀಡಿ ಪರೀಕ್ಷೆ ನಡೆಸಲಾಗುವುದು. ನ್ಯೂನ್ಯತೆ ಕಂಡು ಬಂದರೆ ಆರೋಪಿ ಸ್ಥಾನದಲ್ಲಿ ನಿಮ್ಮನ್ನೇ ನಿಲ್ಲಿಸಲಾಗುತ್ತದೆ ಎಂದು ಶಿಕ್ಷಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ನ್ಯಾಯಮೂತಿರ್ಗಳು, ಜಿಲ್ಲೆಯಲ್ಲಿ ಎಷ್ಟು ಶಾಲೆಗಳಿಗೆ ಅನುದಾನ ಸಿಕ್ಕಿದೆ, ಏನೇನು ಅಭಿವೃದ್ಧಿ ಆಗಿದೆ ಎಂಬುದರ ಕುರಿತು ವರದಿ ಸಿದ್ದಪಡಿಸಿ ವರದಿ ನೀಡಿ ಎಂದು ಸೂಚಿಸಿದರು.

ನಗರ, ಸ್ಥಳಿಯ ಸಂಸ್ಥೆಗಳು:
ನಗರದ ಸ್ವಚ್ಚತೆ ಬಗ್ಗೆ ನ್ಯಾಯಮೂತಿರ್ಗಳು ಅಸಮಧಾನ ವ್ಯಕ್ತಪಡಿಸಿದರು. ಒಳಚರಂಡಿ ಬ್ಲಾಕೇಜ್​ಗಳನ್ನು ತೆರವುಗೊಳಿಸುವಂತೆ ಸೂಚಿದರು. ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ನಗರಸಭೆ ಪೌರಾಯುಕ್ತ ರಮೇಶ್​ ಸುಣಗಾರ ಸಭೆಗೆ ಸಮಜಾಯಿಷಿ ನೀಡುತ್ತಿದ್ದಂತೆ, ಇಂತಹ ಕಾರಣ ನೀಡಬಾರದು. ಕಾಲಕ್ಕೆ ತಕ್ಕಂತೆ ನಿಮ್ಮ ಯೋಗದಾನ ಬದಲಾಯಿಸಿಕೊಳ್ಳಬೇಕು ಎಂದು ಲೋಕಾಯುಕ್ತರು ಸೂಚಿಸಿದರು. ಮುಂದುವರಿದು ಹಾಸ್ಟೆಲ್​ ಗಳಲ್ಲಿ ಯೋಗಾ ಕಡ್ಡಾಯ ಗೊಳಿಸಿ ಎಂದು ಸಮಾಜಕಲ್ಯಾಣ, ಹಿಂದುಳಿದ ವರ್ಗದ ಅಧಿಕಾರಿಗೆ ಸೂಚಿಸಿದರು.

ಅಂಗನವಾಡಿ ಸುಧಾರಿಸಿ:
ಅಂಗನವಾಡಿ ಕಿಟಕಿಗಳಿಗೆ ಪರದೇ ವ್ಯವಸ್ಥೆ ಕೈಗೊಳ್ಳಬೇಕು. ಸೊಳ್ಳೆಗಳಿಂದ ಡೆಂಗ್ಯೂ ಹರಡುವ ಭೀತಿ ಇರುತ್ತದೆ. ಪಾಲಕರು ತಮ್ಮ ಮಕ್ಕಳನ್ನು ನಿಮ್ಮ ಕೈಗೆ ಕೊಟ್ಟಿರುತ್ತಾರೆ. ಅವರ ಆರೋಗ್ಯವನ್ನು ನೀವು ಖಾಳಜಿ ವಹಿಸಬೇಕು ಎಂದು ನ್ಯಾಯಮೂತಿರ್ಗಳು ಹೇಳುತ್ತಿದ್ದಂತೆ, ಪ್ರತಿಕ್ರಿಯೆ ನೀಡಿದ ಇಲಾಖಾ ಅಧಿಕಾರಿ ಶೆಟ್ಟಪ್ಪನ್ನವರ, ಅಂಗನವಾಡಿ ಕಾರ್ಯಕರ್ತರನ್ನು ಸರ್ಕಾರದ ಇತರೆ ಕಾರ್ಯಗಳಿಗೆ ನಿಯೋಜನೆ ಮಾಡುತ್ತಿರುವುದರಿಂದ ದೈನಂದಿನ ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ನೋವು ತೋಡಿಕೊಂಡರು. ಅಂಗನವಾಡಿ ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿದ್ದು, ನೇರವಾಗಿ ಜನ ಸಂಪರ್ಕದಲ್ಲಿ ಇರುತ್ತಾರೆ. ಇದು ತಾತ್ಕಾಲಿಕ ಕೆಲಸ ಆಗಿದ್ದರಿಂದ ಅಭಿವೃದ್ಧಿ ಕೆಲಸಕ್ಕೆ ಸಹಕಾರ ನೀಡಬೇಕು ಎಂದು ಸೂಚಿಸಿದರು.

ಜಿಲ್ಲಾಸ್ಪತ್ರೆಗೆ ಭೇಟಿ:
ನಗರದ ಹೊರ ವಲಯದಲ್ಲಿ ಇರುವ ಜಿಲ್ಲಾಸ್ಪತ್ರೆಗೆ ನ್ಯಾಯಮೂತಿರ್ ಬಿ.ಎಸ್​. ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ಹೊರ ರೋಗಿಗಳ ಆಸನ ವ್ಯವಸ್ಥೆ, ಕಾವಲುಗಾರರು ಇರದಿರುವ ಬಗ್ಗೆ ಅಸಧಾನ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ರೋಗಿಗಳು ತಮ್ಮ ಅಳಲನ್ನು ತೋಡಿಕೊಮಡಿದ್ದರಿಂದ "ಸ್ಥಳದಲ್ಲಿ ಮೇಲ್ವಿಚಾರಣೆ ನಡೆಸಲು ಲೋಕಾ ಕಚೇರಿಯಿಂದ ಅಧಿಕಾರಿ ನಿಯೋಜನೆ ಮಾಡುತ್ತೇನೆ. ವೈದ್ಯರು ತಮ್ಮ ಸೇವೆಯಲ್ಲಿ ನಿರ್ಲಕ್ಷ$್ಯ ವಹಿಸಿದರೆ ದೂರು ದಾಖಲಿಸಲಾಗುವುದು ಎಂದು ವೈದ್ಯಾಧಿಕಾರಿಗಳಿಗೆ ಸ್ಥಳದಲ್ಲೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net