ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಣೀಂದ್ರ ಅವರಿಂದ ವಿಚಾರಣೆ

23mdkj5 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಉಪ ಲೋಕಾಯುಕ್ತ ಕಾರ್ಯ ವ್ಯಾಪ್ತಿಗೆ ಒಳಪಡುವ ಹಲವು ಪ್ರಕರಣ ದೂರುದಾರರು ಮತ್ತು ಎದುರುದಾರರ ಸಮ್ಮುಖದಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಣೀಂದ್ರ ಸೋಮವಾರ ವಿಚಾರಣೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಚಾರಣೆ ಸಂದರ್ಭ ಮಾತನಾಡಿದ ನ್ಯಾಯಮೂರ್ತಿ ಕೆ.ಎನ್. ಣೀಂದ್ರ ಅವರು ೪೦ ದೂರುಗಳಲ್ಲಿ ೨೨ ದೂರುಗಳು ಉಪ ಲೋಕಾಯುಕ್ತ ವ್ಯಾಪ್ತಿಗೆ ಸಂಬಂಸಿದ್ದು, ಈ ದೂರುಗಳನ್ನು ವಿಚಾರಣೆ ಮಾಡಲಾಗುವುದೆಂದರು.

ಉಪ ಲೋಕಾಯುಕ್ತ ವ್ಯಾಪ್ತಿಗೆ ಸಲ್ಲಿಕೆಯಾಗಿರುವ ದೂರುಗಳ ಸಂಬಂಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಲೋಕಾಯುಕ್ತದ ಪ್ರಮುಖ ಉದ್ದೇಶವಾಗಿದೆ. ಭೂಮಿಗೆ ಸಂಬಂಸಿದಂತೆ, ಸೌಲಭ್ಯ ಕಲ್ಪಿಸದೆ ಬಡಾವಣೆಗಳ ನಿರ್ಮಾಣ, ಕೆರೆಗಳು ಮತ್ತು ದೇವರ ಕಾಡುಗಳ ಸಂರಕ್ಷಣೆ, ಭೂಒತ್ತುವರಿ ತೆರವುಗೊಳಿಸುವುದು, ಕಾಲಮಿತಿಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹರಿಸುವುದು ಮತ್ತಿ
ತರ ಹಲವು ದೂರುಗಳಿಗೆ ವಿಚಾರಣೆ ನಡೆಸಿದ ಉಪ ಲೋಕಾಯುಕ್ತರು, ಕಾಲಮಿತಿಯಲ್ಲಿ ಸಾರ್ವಜನಿಕರ ಸಮಸ್ಯೆ ಇತ್ಯರ್ಥ ಪಡಿಸಿ ವರದಿ ನೀಡುವಂತೆ ಅಕಾರಿಗಳಿಗೆ ಆದೇಶಿಸಿದರು.

ಜಾಗ ಒತ್ತುವರಿಗೆ ಸಂಬಂಸಿದಂತೆ ದೂರು ದಾಖಲಾಗಿದ್ದು, ಸದ್ಯ ಪ್ರಕರಣ ಇತ್ಯರ್ಥವಾಗಿದೆ. ಮತ್ತೆ ಒತ್ತುವರಿಯಾದರೆ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶಿಸಿದರು. ಜಾಗದ ಖಾತೆ ಸಂಬಂಸಿದಂತೆ ದೂರು ದಾಖಲಾಗಿ ದ್ದು, ಕಾನೂನು ಪ್ರಕಾರ ಖಾತೆ ಮಾಡಿಕೊಡಬಹುದೇ ಇಲ್ಲವೇ ಎಂಬುದನ್ನು ಹಿಂಬರಹ ನೀಡಬೇಕು. ಅದನ್ನು ಬಿಟ್ಟು ಸತಾಯಿಸು ವುದು ಸರಿಯಲ್ಲ ಎಂದು ಸೂಚಿಸಿದರು. ಈ ಕುರಿತು ಅಕಾರಿಗಳು ಮಾಹಿತಿ ನೀಡಿ, ಈಗಾಗಲೇ ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಸ್. ಅಶೋಕ್ ಎಂಬವರು ಕುಶಾಲನಗರದಲ್ಲಿ ಎಲ್ಲೆಂದರಲ್ಲಿ ಖಾಸಗಿ ಬಡಾವಣೆಗಳು ನಿರ್ಮಾಣವಾಗುತ್ತಿದ್ದು, ಕೆಲವು ಬಡಾವಣೆಗಳನ್ನು ಅನುಮತಿ ಪಡೆಯದೆ ನಿರ್ಮಿಸಲಾಗಿದೆ ಎಂದು ಉಪ ಲೋಕಾಯುಕ್ತರ ಗಮನಕ್ಕೆ ತಂದರು. ಬಡಾವಣೆ ನಿರ್ಮಿಸುವಾಗ ರಸ್ತೆ, ಚರಂಡಿ, ಉದ್ಯಾನ ಹೀಗೆ ಹಲವು ಮೂಲಸೌಲಭ್ಯಗಳು ಒಳಗೊಂಡಿಲ್ಲ. ಜಿಲ್ಲಾಕಾರಿ ನ್ಯಾಯಾಲಯದಲ್ಲಿ ಈ ಪ್ರಕರಣ ಇರುವುದರಿಂದ ೨ ತಿಂಗಳಲ್ಲಿ ಪ್ರಕರಣ ಇತ್ಯರ್ಥಪಡಿಸಲಿದ್ದಾರೆಂದು ತಿಳಿಸಿದರು.

ಗೋಣಿಕೊಪ್ಪದಲ್ಲೂ ಸಹ ನಾಗರಿಕ ಸೌಲಭ್ಯ ಕಲ್ಪಿಸದೆ ಹಾಗೂ ನಕ್ಷೆ ಅನುಮೋದನೆ ಪಡೆಯದೆ ಬಡಾವಣೆ ನಿರ್ಮಿಸಲಾಗಿದೆ ಎಂದು ವಿ.ಎಸ್. ಸೂರ್ಯ ದೂರಿದರು. ಈ ಬಗ್ಗೆ ಎಂಜಿನಿಯರ್ ಕಳುಹಿಸಿ ಪರಿಶೀಲಿಸಲಿದ್ದು, ಬಳಿಕ ಕ್ರಮ ತೆಗೆದುಕೊಳ್ಳಲಾಗುವುದೆಂದು ನ್ಯಾಯಮೂರ್ತಿ ಹೇಳಿದರು.

ಕರ್ನಾಟಕ ಲೋಕಾಯುಕ್ತ ಜಿಲ್ಲಾ ರಿಜಿಸ್ಟ್ರಾರ್ ತನಿಖಾ ವಿಭಾಗದ ಹಿರಿಯ ನ್ಯಾಯಾೀಶರಾದ ಚೆನ್ನಕೇಶವ ರೆಡ್ಡಿ, ಕರ್ನಾಟಕ ಲೋಕಾಯುಕ್ತದ ಪಬ್ಲಿಕ್ ಪ್ರಾಸಿಕ್ಯೂಟರ್ ಡಿ.ನಾರಾಯಣ, ಜಿಲ್ಲಾಕಾರಿ ಡಾ.ಬಿ.ಸಿ. ಸತೀಶ, ಜಿಲ್ಲಾ ಕಾನೂನು ಸೇವಾ ಪ್ರಾಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ. ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ, ಲೋಕಾಯುಕ್ತ ಎಸ್.ಪಿ. ಸುರೇಶ್ ಬಾಬು, ಮೈಸೂರು ಜಿಲ್ಲೆಯ ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಕೃಷ್ಣಯ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net