ಹಾಸನ ಲೋಕಾಯುಕ್ತ ಎಸ್ಪಿ ಮಲ್ಲಿಕ್ ಸಲಹೆ

12blrp1.
Published on

ಬೇಲೂರು: ಸಾರ್ವಜನಿಕರು ಧೈರ್ಯವಾಗಿ ಮುಂದೆ ಬಂದು ಸರಿಯಾದ ಮಾಹಿತಿ ಮತ್ತು ದೂರು ದಾಖಲೆ ಮಾಡಿದರೆ ಮಾತ್ರ ಸಮಸ್ಯೆ ನಿವಾರಿಸಿ ಭ್ರಷ್ಟಾಚಾರ ತಡೆಗಟ್ಟಲು ಸಾಧ್ಯ ಎಂದು ಹಾಸನ ಲೋಕಾಯುಕ್ತ ಎಸ್ಪಿ ಮಲ್ಲಿಕ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಹಾಸನ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರಿಂದ ದೂರು ಅರ್ಜಿಗಳನ್ನು ಸ್ವೀಕರಿಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಕರೆಸಿ ಸ್ಥಳದಲ್ಲೆ ಮಾಹಿತಿ ಪಡೆದ ನಂತರ ಅವರು ಮಾತನಾಡಿದರು. ಪ್ರತಿ ತಿಂಗಳ ಎರಡನೇ ಬುಧವಾರ ಜಿಲ್ಲೆಯ ಯಾವುದಾದರು ಒಂದು ತಾಲೂಕಿಗೆ ಭೇಟಿ ನೀಡುತ್ತೇವೆ. ಆ ಸಂದರ್ಭದಲ್ಲಿ ಸಾರ್ವಜನಿಕರು ಭಾಗವಹಿಸಿ ಯಾವುದೇ ಕುಂದು ಕೊರತೆಗಳಿದ್ದರೂ ತಿಳಿಸಬಹುದು. ವಿವಿಧ ಇಲಾಖೆಗೆಳಲ್ಲಿ ಕೆಲಸ ಮಾಡಿಸಲು ಅರ್ಜಿ ಕೊಟ್ಟು ವಿಳಂಬವಾಗಿದ್ದರೆ, ಕೆಲಸ ಮಾಡಿಕೊಡಲು ಯಾರಾದರೂ ಲಂಚ ಕೇಳಿದರೆ ಅಂಥವರ ವಿರುದ್ಧ ದೂರು ಸಲ್ಲಿಸಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net