ಭೂ ದಾಖಲೆ ಕಚೇರಿ ಪರಿಶೀಲಿಸಿದ ಲೋಕಾಯುಕ್ತರು

Lokayukta
Published on

ಭೂ ದಾಖಲೆ ಕಚೇರಿ ಪರಿಶೀಲಿಸಿದ ಲೋಕಾ ಪೊಲೀಸ್
ಕಲಬುರಗಿ: ಲಂಚ ಪಡೆಯುತ್ತಿದ್ದಾಗ ರೆಡ್ ರ‍್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ಪ್ರವೀಣ ಜಾಧವ್ ಕಚೇರಿಗೆ ಲೋಕಾಯುಕ್ತ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಶುಕ್ರವಾರ ಬೆಳಗ್ಗೆ ಕಚೇರಿಗೆ ಲೋಕಾಯುಕ್ತ ಎಸ್‌ಪಿ ಜಾನ್ ಆಂಟೋನಿ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ರಾಜಶೇಖರ ಹಳಗೋದಿ ನೇತೃತ್ವದ ತಂಡ ಭೇಟಿ ನೀಡಿತು. ಈ ವೇಳೆ ಕಚೇರಿಯಲ್ಲಿನ ದಾಖಲೆ ಪತ್ರ, ಸಿಸಿ ಕ್ಯಾಮೆರಾ ರಿಕಾರ್ಡಿಂಗ್, ಹಲವು ಕಡತ ವಶಕ್ಕೆ ಪಡೆಯಲಾಯಿತು. ಕಚೇರಿಯಲ್ಲಿನ ಅಧಿಕಾರಿಯ ಕಂಪ್ಯೂಟರ್‌ನಲ್ಲಿನ ಕಡತ, ಚಲನ ವಲನ ರಿಜಿಸ್ಟರ್, ಹಾಜರಾತಿ ಪುಸ್ತಕ ಮತ್ತು ಕ್ಯಾಶ್ ರಿಜಿಸ್ಟರ್ ಪರಿಶೀಲಿಸಲಾಯಿತು. ಅಧಿಕಾರಿಗಳಿಂದ ಹಲವು ಪೂರಕ ಮಾಹಿತಿ ಪಡೆಯಲಾಯಿತು. ನಂತರ ಸ್ಥಳ ಪಂಚನಾಮ ಮಾಡಲಾಯಿತು. ಲೋಕಾಯುಕ್ತ ಪೊಲೀಸ್ ಸಿಬ್ಬಂದಿ ಸಿದ್ದರಾಮ, ಅನೀಲ, ಬಸವರಾಜ, ಅಶೋಕ, ವಿಷ್ಣು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net