

ವಿಟ್ಲ: ಭ್ರಷ್ಟಾಚಾರ ಪಿಡುಗಾಗಿ ಕಾಡುತ್ತಿದ್ದು, ಆಡಳಿತ ಸುಧಾರಣೆ ತರುವ ಮೂಲಕ ತಡೆಯುವ ಕಾರ್ಯ ಮಾಡಲಾಗುತ್ತಿದೆ. ವಿಸಿಟರ್ ಬುಕ್ ಜತೆಗೆ ಮೂಮೆಂಟ್ ರಿಜಿಸ್ಟ್ರರ್ ಹಾಗೂ ಕ್ಯಾಷ್ ಡಿಸ್‌ಕ್ಲೋಸ್ ರಿಜಿಸ್ಟ್ರರನ್ನು ಅಽಕಾರಿಗಳು ಸರಿಯಾಗಿ ಇಡಬೇಕು. ದಿನದ ವೇತನಕ್ಕಿಂತ ಹೆಚ್ಚಿನ ಹಣವನ್ನು ಅಽಕಾರಿಗಳು ಇಟ್ಟುಕೊಳ್ಳುವ ಹಾಗಿಲ್ಲ. ಕಾಮಗಾರಿಗಳಿಗೆ ಸಂಬಂಽಸಿದ ಆರೋಪಗಳಿಗೆ ಐದು ವರ್ಷದ ಒಳಗೆ ಹಾಗೂ ಲಂಚ ಪಡೆದ ವಿಚಾರದಲ್ಲಿ ಏಳು ದಿನದ ಒಳಗೆ ಸಾಕ್ಷ್ಯ ಸಹಿತ ದೂರು ನೀಡಲು ಅವಕಾಶವಿದೆ ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ. ಎ. ನಟರಾಜ್ ಹೇಳಿದರು.
ಅಳಿಕೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಂಗಳೂರು ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ವತಿಯಿಂದ ಅ.೨೮ರಿಂದ ನ.೩ರವರೆಗೆ ನಡೆಯುವ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ- ೨೦೨೪ ಉದ್ಘಾಟಿಸಿ ಮಾತನಾಡಿದರು.
ಲೋಕಾಯುಕ್ತ ಪೊಲೀಸ್ ಉಪಅಧೀಕ್ಷಕಿ ಡಾ.ಗಾನ ಪಿ. ಕುಮಾರ್ ಮಾತನಾಡಿ, ಸಾರ್ವಜನಿಕರು ಸರ್ಕಾರಿ ಕಚೇರಿಯನ್ನು ಬಿಟ್ಟು ಕೆಲಸ ನಡೆಸಲು ಸಾಧ್ಯವಿಲ್ಲ. ಅಽಕಾರಿಗಳು ಸಾರ್ವಜನಿಕ ಸೇವಕರಾಗಿದ್ದು, ಸರಿಯಾದ ಸೇವೆಯನ್ನು ನೀಡುವುದು ಜವಾಬ್ದಾರಿಯಾಗಿದೆ. ಅಽಕಾರಿಗಳು ದೂರಿಗೆ ಸ್ಪಂದಿಸದ ಸಂದರ್ಭ ಲೋಕಾಯುಕ್ತಕ್ಕೆ ದೂರು ನೀಡಬಹುದು. ಕಾನೂನಿನ ಅರಿವು ನೀಡುವುದರಿಂದ ಜನರು ಎಚ್ಚರವಾಗುತ್ತಾರೆ. ಪಂಚಾಯಿತಿ ಮಟ್ಟದಿಂದ ಜನರು ಪ್ರಶ್ನಿಸುವುದಕ್ಕೆ ಮುಂದಾದಾಗ ದೇಶದಲ್ಲಿ ಸುಧಾರಣೆ ತರಲು ಸಾಧ್ಯ ಎಂದರು.
ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಅಧ್ಯಕ್ಷತೆ ವಹಿಸಿದ್ದರು. ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟಿನ ಸಾರ್ವಜನಿಕ ಸಂಪರ್ಕಾಧಿಕಾರಿ ಚಂದ್ರಶೇಖರ ಉಪಸ್ಥಿತರಿದ್ದರು. ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಅಮಾನುಲ್ಲಾ ಎ. ಸ್ವಾಗತಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನಂಜಯ ವಂದಿಸಿದರು. ಸದಾಶಿವ ಶೆಟ್ಟಿ ಮಡಿಯಾಲ ಕಾರ್ಯಕ್ರಮ ನಿರೂಪಿಸಿದರು.
ಸಾರ್ವಜನಿಕರಿಂದ ಸಮಸ್ಯೆಗಳ ದೂರು
ಮಂಗಳೂರಿನ ಕಾನೂನು ಸೇವಾ ಪ್ರಾಧಿಕಾರ ಕಚೇರಿಯಲ್ಲಿ ವಿಸಿಟರ್ ಬುಕ್ ಇಟ್ಟಿಲ್ಲ. ಸರ್ವರ್ ಸಮಸ್ಯೆಯಿಂದ ಪಡಿತರ ವ್ಯವಸ್ಥೆ ಸೇರಿ ಪಂಚಾಯಿತಿಯಲ್ಲಿ ಸರ್ಕಾರದ ೪೪ ಸೇವೆಗಳು ಲಭಿಸುತ್ತಿಲ್ಲ. ಪುಣಚ ಮಡ್ಯಾರಬೆಟ್ಟು ಸೇತುವೆ ವಿಚಾರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ತುರ್ತು ವ್ಯವಸ್ಥೆಗೆ ಮುಂದಾಗುತ್ತಿಲ್ಲ. ಸ್ಮಶಾನಕ್ಕೆ ಕಾಯ್ದಿರಿಸಿದ ಜಾಗ ಒತ್ತುವರಿ ವಿಚಾರದಲ್ಲೂ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಪೆರುವಾಯಿ ಸಹಕಾರಿ ಸಂಘದ ಶಾಖೆಯ ಹೊಸ ಕಟ್ಟಡ ನಿರ್ಮಾಣದಲ್ಲಿ ಅವ್ಯವಹಾರ ನಡೆದಿರುವುದು ಹಾಗೂ ಮಹಾಸಭೆಯ ನೋಟಿಸ್‌ನಲ್ಲಿ ಖರ್ಚುವೆಚ್ಚ ತೋರಿಸಿದ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ದೂರು ನೀಡಿದರೂ ತನಿಖೆ ನಡೆಸದ ವಿಚಾರವನ್ನು ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರು.
ಜಿಲ್ಲೆಗೆ ಉಪಲೋಯುಕ್ತರ ಆಗಮನ
ಜಿಲ್ಲೆಗೆ ರಾಜ್ಯ ಉಪಲೋಕಾಯುಕ್ತರು ಡಿ.೪ರಂದು ಆಗಮಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೆಲ್ಲರೂ ಭಾಗವಹಿಸುವ ಕಾರಣ ಅಲ್ಲಿ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು. ಸಾರ್ವಜನಿಕರು ಕಾರ್ಯಕ್ರಮಕ್ಕೆ ಮುಂಚಿತವಾಗಿ ಅಹವಾಲುಗಳನ್ನು ನೀಡಿದರೆ, ಅಗತ್ಯವಿರುವ ಎಲ್ಲ ಅಧಿಕಾರಿಗಳನ್ನು ಕರೆಸಿ ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.