

ಬೆಳಗಾವಿ : ಐದು ಸಾವಿರ ರೂ.ಲಂಚದ ಹಣ ಪಡೆಯುವಾಗ ನಿಪ್ಪಾಣಿಯ ಉಪ ತಹಸೀಲ್ದಾರ್ ಹಾಗೂ ವಿಲೇಜ್ ಅಕೌಂಟೆಂಟ್ ಲೋಕಾಯುಕ್ತ ಬಲೆ ಇಂದು ಸಿಕ್ಕಿ ಬಿದ್ದಿದ್ದಾರೆ.
ನಿಪ್ಪಾಣಿ ಉಪ ತಹಶಿಲ್ದಾರ ಅಭಿಜಿತ್ ಬೋಂಗಾಳೆ ಹಾಗೂ ಉಪ ತಹಸೀಲ್ದಾರ್ ಜತೆ ಗ್ರಾಮ ಲೆಕ್ಕಾಧಿಕಾರಿ ಪಾರೀಸ ಸತ್ತಿ ಇಬ್ಬರೂ ತಲಾ 5 ಸಾವಿರ ಹಣ ಪಡೆಯುವಾಗ ದಾಳಿ ನಡೆಸಿದ ಲೋಕಾಯುಕ್ತ ತಂಡ ಇಬ್ಬರನ್ನು ಖೇಡ್ಡಾಗೆ ಬಿಳಿಸಿದೆ.
ಇವರಿಬ್ಬರು ಆಸ್ತಿಯ ಹೆಸರು ಬದಲಾವಣೆ ಮಾಡಲು ನಿಪ್ಪಾಣಿಯ ರಾಜಕುಮಾರ ತುಕಾರಾಮ್ ಶಿಂಧೆ ಅವರಿಂದ ಹಣದ ಬೇಡಿಕೆ ಇಟ್ಟಿದ್ದರು. ಈ ಕುರಿತು ರಾಜಕುಮಾರ ಶಿಂಧೆ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ.