ಜೆಸ್ಕಾಂ ಎಇಇ ಹುಸೇನ್ ಸಾಬ್ ಮನೆ ಮೇಲೆ ಲೋಕಾ ದಾಳಿ

IMG_20230424_103138.jpg
Published on

ಹೊಸಪೇಟೆ: ಬಳ್ಳಾರಿ ಜೆಸ್ಕಾಂ ಎಇಇ ಹುಸೇನ್ ಸಾಬ್ ಅವರಿಗೆ ಸಂಬಂಧಿಸಿರುವ ಇಲ್ಲಿನ ವಿದ್ಯಾನಗರದ ಅಪಾರ್ಟ್ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಆದಾಯ ಮೀರಿ ಆಸ್ತಿ ಗಳಿಕೆಗೆ ಸಂಬಂಧಿಸಿದ ದಾಖಲೆಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಲೋಕಾಯುಕ್ತ ಇನ್ಸಪೆಕ್ಟರ್ ರಾಜೇಶ್ ನೇತೃತ್ವದ ತಂಡ ಸೋಮವಾರ ಬೆಳ್ಳಂಬೆಳಿಗ್ಗೆ ವಿದ್ಯಾನಗರದ ಅಪಾರ್ಟ್ಮೆಂಟ್ ಗೆ ಆಗಮಿಸಿದ್ದು, ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳಿಗೆ ಹುಡುಕಾಟ ನಡೆಸಿದ್ದಾರೆ.
ಜೆಸ್ಕಾಂ ಎಇಇ ಹುಸೇನ್ ಸಾಬ್ ಅವರು ಬಳ್ಳಾರಿ ತಾಲೂಕಿನ ಸಿಡಿಗಿನಮೊಳ ಗ್ರಾಮದವರಾಗಿದ್ದು, ಕಿರಿಯ ಅಭಿಯಂತರರಾಗಿ ನೇಮಕಗೊಂಡಿದ್ದರು. ನಂತರ ಸಹಾಯಕ ಅಭಿಯಂತರರಾಗಿ ಬಡ್ತಿ ಹೊಂದಿ ಹೊಸಪೇಟೆಗೆ ವರ್ಗಾವಣೆಯಾಗಿದ್ದರು. ಸುಮಾರು ೧೦ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹುದ್ದೆಗೆ ಬಡ್ತಿ ಪಡೆದು, ಪುನಃ ಬಳ್ಳಾರಿಗೆ ವರ್ಗವಾಗಿದ್ದರು. ಇನ್ನು ಮೂರು ವರ್ಷ ಸೇವಾವಧಿ ಇದ್ದು, ಹುಸೇನ್ ಸಾಬ್ ಅವರ ವಿರುದ್ಧ ಭ್ರಷ್ಟಾಚಾರ ಮತ್ತು ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದವು.
ಈ ಹಿನ್ನೆಲೆಯಲ್ಲಿ ಬಳ್ಳಾರಿಯ ಕಚೇರಿ, ಮನೆ ಹಾಗೂ ಹೊಸಪೇಟೆಯ ಅಪಾರ್ಟ್ ಮೆಂಟ್ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net