ಬಿಬಿಎಂಪಿ ಸಹಾಯಕ ಆಯುಕ್ತರ ಸ್ವಗ್ರಾಮದ ಮನೆ ಮೇಲೆ ಲೋಕಾಯುಕ್ತ ದಾಳಿ

lokayukta-1704779717
Published on

ಕಲಬುರಗಿ: ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಸಿದ ಆರೋಪದ ಮೇಲೆ ಬಿಬಿಎಂಪಿಯ ಸಹಾಯಕ ಆಯುಕ್ತ ಬಸವರಾಜ ಮಗ್ಗಿ ಅವರ ಸ್ವಗ್ರಾಮ, ಕಲಬುರಗಿ ತಾಲೂಕಿನ ಪಾಳಾ ಗ್ರಾಮದ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಏಕಾಏಕಿ ದಾಳಿ ಮಾಡಿದ್ದಾರೆ.

ಬೆಂಗಳೂರಿನ ಬಿಬಿಎಂಪಿ ಮಹದೇವಪುರ ವಿಭಾಗದ ಸಹಾಯಕ ಆಯುಕ್ತರಾಗಿರುವ ಬಸವರಾಜ ಕಲಬುರಗಿ ಪಾಳಾ ಗ್ರಾಮದವರು.

ಕಲಬುರಗಿ ಲೋಕಾಯುಕ್ತ ಎಸ್‌.ಪಿ .ಜಾನ್ ಆಂಟೋನಿ ಅವರ ಮಾರ್ಗದರ್ಶನದಲ್ಲಿ
ಡಿಎಸ್‌ಪಿ ಮಂಜುನಾಥ್, ಇನ್‌ಸ್ಪೆಕ್ಟರ್ ಹನುಮಂತ್ ಅವರಿದ್ದ ತಂಡ ಕಲಬುರಗಿ ನಗರ ಮತ್ತು ಪಾಳಾದಲ್ಲಿನ ಮನೆಗಳ ಮೇಲೆ ದಾಳಿ ಮಾಡಿ, ಕಡತಗಳ ಪರಿಶೀಲಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net