ಪ್ರಥಮ ದರ್ಜೆ ಗುಮಾಸ್ತನ ಮನೆ ಮೇಲೆ ಲೋಕಾ ದಾಳಿ

loka
Published on

 ವಿಜಯವಾಣಿ ಸುದ್ದಿಜಾಲ ಹೊಸಕೋಟೆ

ಪ್ರಥಮ ದರ್ಜೆ ಗುಮಾಸ್ತ ಅನಂತ್ ಎಂಬುವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಹೊಸಕೋಟೆ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಗುಮಾಸ್ತನಾಗಿರುವ ಅನಂತ್ ಅವರ ಅನುಗೊಂಡನಹಳ್ಳಿ ಹೋಬಳಿಯ ಬೋಧನಹೊಸಹಳ್ಳಿ ಗ್ರಾಮದ ಮನೆ ಮೇಲೆ ದಾಳಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್‌ಪಿ ಪವನ್ ನಚ್ಚೂರು, ಡಿವೈಎಸ್ಪಿ ಗಿರೀಶ್, ಇನ್ಸ್‌ಪೆಕ್ಟರ್ ನಂದಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ತಪಾಸಣೆ ನಡೆಸಿದೆ. ಬೋಧನಹೊಸಹಳ್ಳಿ ಗ್ರಾಮದಲ್ಲಿರುವ ಅನಂತ ಅವರ ಮನೆ, ಬಾಮೈದ ಹಾಗೂ ಮಾವನ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿ ಮನೆಯಲ್ಲಿದ್ದಂತಹ ಆಸ್ತಿಪತ್ರಗಳು, ನಗದು, ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನ ಪರಿಶೀಲನೆ ನಡೆಸಿದ್ದಾರೆ.

ಹೊಸಕೋಟೆ ತಾಲೂಕು ಭೂ ಮಂಜೂರಾತಿ ಕಚೇರಿಯಲ್ಲಿ ಎಫ್‌ಡಿಸಿ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಅನಂತ್ ಅದಾಯಕ್ಕೂ ಮೀರಿ ಹಣ ಗಳಿಸಿದ್ದಾರೆ ಎಂಬ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ಮನೆಯಲ್ಲಿ 3 ಲಕ್ಷ ರೂ.ನಗದು, 11 ಚಿನ್ನದ ಉಂಗುರು, 2 ಕೆಜಿ ಬೆಳ್ಳಿ, 2 ಬ್ರಾಸ್ ಲೈಟ್, ಚಿನ್ನದ ಡಾಬು ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net