ಲೋಕಾಯುಕ್ತ ಪೊಲೀಸರ ದಾಳಿ

Published on

ಚಿತ್ರದುರ್ಗ: ನಿಗದಿತ ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ್ದಾರೆಂಬ ದೂರಿನ ಮೇರೆಗೆ ಇಂಜಿನಯರ್ ದಂಪತಿಯ ಕಚೇರಿ ಹಾಗೂ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳಗ್ಗೆ ದಿಢೀರ್ ದಾಳಿ ಮಾಡಿ ಅಪಾರ ಪ್ರಮಾಣದ ನಗದು, ಆಸ್ತಿ ಮತ್ತಿತರ ದಾಖಲೆ ವಶಪಡಿಸಿಕೊಂಡಿದ್ದಾರೆ.

ಬಿಬಿಎಂಪಿ (ಕೆರೆಗಳ ಅಭಿವೃದ್ಧಿ ವಿಭಾಗ) ಇಂಜಿನಿಯರ್ ಭಾರತಿ ಹಾಗೂ ಅವರ ಪತಿ ಹೊಳಲ್ಕೆರೆಯ ಸಣ್ಣ ನೀರಾವರಿ ಇಲಾಖೆ ಇಂಜನಿಯರ್ ಮಹೇಶ ಅವರ ಕಚೇರಿ ಹಾಗೂ ಹೊಳಲ್ಕೆರೆ, ದಾವಣಗೆರೆಯ ನಿವಾಸಗಳ ಮೇಲೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ ನೇತೃತ್ವದ ತಂಡ ಏಕಕಾಲಕ್ಕೆ ಪ್ರತ್ಯೇಕವಾಗಿ ದಾಳಿ ನಡೆಸಿತು.

ದಾವಣಗೆರೆ ನಿವಾಸದಲ್ಲಿ ಅಂದಾಜು ಒಂದು ಕೆಜಿ ಚಿನ್ನ , 15 ಲಕ್ಷ ರೂ. ನಗದು, ಅಂದನೂರು ಬಳಿ ಏಳೂವರೆ ಎಕರೆ ಕೃಷಿಭೂಮಿ ಮತ್ತು ದಾವಣಗೆರೆಯಲ್ಲಿ 2 ನಿವೇಶನಗಳ ದಾಖಲೆ ಸಿಕ್ಕಿವೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ಹೊಳಲ್ಕೆರೆಯಲ್ಲಿ ಲೋಕಾಯುಕ್ತ ಸಿಪಿಐ ವಸಂತಕುಮಾರ್, ದಾವಣಗೆರೆಯಲ್ಲಿ ಎಸ್‌ಪಿ ನೇತೃತ್ವದಡಿ ಡಿವೈಎಸ್ಪಿ ಮೃತ್ಯುಂಜಯ, ಸಿಪಿಐ ಶಿಲ್ಪಾ ಹಾಗೂ ಬಿಬಿಎಂಪಿ ಕಚೇರಿಯಲ್ಲಿ ಶಿವಮೊಗ್ಗ ಲೋಕಾಯುಕ್ತ ಡಿವೈಎಸ್‌ಪಿ ಉಮೇಶ್ ಅವರ ತಂಡ ಪರಿಶೀಲನೆ ನಡೆಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net