ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್​.ಪಾಟೀಲ ಜಿಲ್ಲಾ ಪ್ರವಾಸ

vijayavani logo
Published on

ವಿಜಯಪುರ: ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್​. ಪಾಟೀಲ ಆ.8 ರಿಂದ ಆ. 12 ರ ವರೆಗೆ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

ಆ. 8 ರಂದು ಸಂಜೆ ಬೆಳಗಾವಿಯಿಂದ ಜಿಲ್ಲೆಯ ಪಡೇಕನೂರಗೆ ಆಗಮಿಸಿ ವಾಸ್ತವ್ಯ ಮಾಡುವರು. ಆ. 9 ಹಾಗೂ ಆ. 10 ರಂದು ಪರಿಶೀಲನೆ ನಡೆಸಿ ಬಳಿಕ ಪಡೇಕನೂರದಲ್ಲಿ ವಾಸ್ತವ್ಯ ಮಾಡುವರು. ಆ. 11 ರಂದು ಬೆಳಗ್ಗೆ 8.30ಕ್ಕೆ ಪಡೇಕನೂರದಿಂದ ಹೊರಟು ವಿಜಯಪುರಕ್ಕೆ ಆಗಮಿಸಿ, ಬೆಳಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮತ್ತೆ ಪಡೇಕನೂರಗೆ ಪ್ರಯಾಣ ಬೆಳೆಸಿ ವಾಸ್ತವ್ಯ ಮಾಡುವರು.

ಆ. 12 ರಂದು ಬೆಳಗ್ಗೆ 9 ಗಂಟೆಗೆ ಪರಿಶೀಲನೆ ನಡೆಸಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net