ಕ್ಯಾಷುಟೆಕ್ ಯೋಜನಾಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

30-10-Shiva-1
ಲೋಕಾಯುಕ್ತ ದಾಳಿ ನಡೆಸಿ ರಾಯಚೂರಿನ ಗಂಗಾಪರಮೇಶ್ವರ ಬಡಾವಣೆಯಲ್ಲಿರುವ ಕ್ಯಾಷುಟೆಕ್ ಯೋಜನಾಕಾರಿ ಶರಣಬಸಪ್ಪ ಪಟ್ಟೇದ್ ಮನೆಯ ಹೊರನೋಟ.
Published on

ರಾಯಚೂರು
ನಗರದ ಕ್ಯಾಷುಟೆಕ್ ಮತ್ತು ನಿರ್ಮಿತಿ ಕೇಂದ್ರದ ಯೋಜನಾಕಾರಿ ಶರಣಬಸಪ್ಪ ಪಟ್ಟೇದ್ ಮನೆ, ಕಚೇರಿ ಮೇಲೆ ಸೋಮವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಕಾರಿಗಳು ದಾಳಿ ನಡೆಸಿ ಅಕ್ರಮ ಆಸ್ತಿ ಕುರಿತು ಪರಿಶೀಲನೆ ನಡೆಸಿದ್ದಾರೆ.
ನಗರದ ಗಂಗಾಪರಮೇಶ್ವರಿ ಬಡಾವಣೆಯಲ್ಲಿರುವ ಶರಣಬಸಪ್ಪ ಪಟ್ಟೇದ್ ಮನೆ, ತಾಲೂಕಿನ ಶಕ್ತಿನಗರದಲ್ಲಿನ ಕ್ಯಾಷುಟೆಕ್ ಕಚೇರಿ ಮತ್ತು ದೇವಸುಗೂರಿನ ಅಳಿಯನ ಮನೆ ಮೇಲೆ ಏಕಕಾಲಕ್ಕೆ ಅಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಎಸ್ಪಿ ಡಾ.ರಾಮ್ ಅರಸಿದ್ದಿ ನೇತೃತ್ವದ ತಂಡ ಆದಾಯ ಮೀರಿ ಆಸ್ತಿ ಗಳಿಕೆ ಅನುಮಾನದ ಮೇಲೆ ಶರಣಬಸಪ್ಪ ಪಟ್ಟೇದ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ. ಮನೆಯಲ್ಲಿ ಕೇವಲ 7 ತೊಲೆ ಚಿನ್ನಾಭರಣ ಮತ್ತು 15 ಸಾವಿರ ರೂ. ನಗದು ಮಾತ್ರ ದೊರೆತಿದೆ ಎಂದು ಮೂಲಗಳು ತಿಳಿಸುತ್ತಿವೆ.
ದೇವಸುಗೂರಿನಲ್ಲಿನ ಶರಣಬಸಪ್ಪ ಪಟ್ಟೇದ್ ಅಳಿಯ ಮನೆಯಲ್ಲಿನ ದಾಖಲೆಗಳ ಪರಿಶೀಲನೆ ಕಾರ್ಯ ನಡೆಸಲಾಗುತ್ತಿದ್ದು, ಆಸ್ತಿಗಳ ದಾಖಲೆಗಳನ್ನು ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ. ಜತೆಗೆ ಸ್ವಗ್ರಾಮ ಚಿಕ್ಕ ಹೆಸರೂರಿನಲ್ಲಿ ಜಮೀನುಗಳ ಮಾಹಿತಿಯನ್ನು ಅಕಾರಿಗಳು ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net