ಲೆಕ್ಕಸಹಾಯಕನಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಅಗನಸಪುರ ಗ್ರಾಪಂ ನೌಕರನ ಮನೆ ಮೇಲೆ ದಾಳಿ….!

https://www.vijayavani.net/lokayukta-attack-agsanpur-gram-panchayat-accountant-mandya
Published on

ಮಂಡ್ಯ: ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಮಳವಳ್ಳಿ ತಾಲೂಕು ಅಗಸನಪುರ ಗ್ರಾಮ ಪಂಚಾಯಿತಿ ಲೆಕ್ಕಸಹಾಯಕ ಕೃಷ್ಣೇಗೌಡ ಎಂಬುವರ ಮನೆ ಮೇಲೆ ಬುಧವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಅಗಸನಪುರ, ಕೊಡಿಯಾಲ, ಚೀರನಹಳ್ಳಿ, ತುರುಗನಹಳ್ಳಿ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಲೋಕಾಯುಕ್ತ ಎಸ್ಪಿ ಸುರೇಶ್‌ಬಾಬು ನೇತೃತ್ವದಲ್ಲಿ ಕಡತಗಳ ಪರಿಶೀಲನೆ ನಡೆಯುತ್ತಿದೆ. ಈ ವೇಳೆ ಎರಡು ಲಕ್ಷ ರೂ ನಗದು ಹಾಗೂ 500 ಗ್ರಾ ಚಿನ್ನ, ಎರಡು ಕೆಜಿಯಷ್ಟು ಬೆಳ್ಳಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net