ಲೋಕಾ ದಾಳಿಕ ಬಳಿಕ ತಹಸೀಲ್ದಾರ್ ನಾಪತ್ತೆ

271020 Siriguppa Tahasildar SB Kudalagi
ಸಿರಗುಪ್ಪ ತಹಸೀಲ್ದಾರ್ ಎಸ್.ಬಿ.ಕೂಡಲಗಿ.
Published on

ಪುತ್ತೂರು: ಲೋಕಾಯುಕ್ತ ದಾಳಿ ಬಳಿಕ ನಾಪತ್ತೆಯಾದ ತಹಸೀಲ್ದಾರ್ ಎಸ್.ಬಿ.ಕೂಡಲಗಿ ಅವರು ಇನ್ನೂ ಪತ್ತೆಯಾಗಿಲ್ಲ. ಮಂಗಳವಾರವೂ ಕರ್ತವ್ಯಕ್ಕೆ ಹಾಜರಾಗದಿದ್ದರೆ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಆ.೨೮ರಂದು ಅಕ್ರಮ-ಸಕ್ರಮದ ದರ್ಖಾಸು ಜಮೀನಿಗೆ ನಿರಾಕ್ಷೇಪಣಾ ಪತ್ರ ನೀಡಲು ೧೨ ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಽಕಾರಿಗಳು ದಾಳಿ ನಡೆಸಿ ತಾಲೂಕು ಆಡಳಿತದ ಕಚೇರಿಯ ಭೂಸುಧಾರಣಾ ಶಾಖೆ ಕೇಸ್ ವರ್ಕರ್ ಸುನೀಲ್‌ನನ್ನು ಬಂಽಸಿದ್ದರು. ತಹಸೀಲ್ದಾರ್‌ಗೆ ಹಣ ನೀಡಬೇಕಾಗುತ್ತದೆ ಎಂದು ಆತ ತಿಳಿಸಿದ್ದರಿಂದ ತಹಸೀಲ್ದಾರ್ ಮೇಲೂ ಪ್ರಕರಣ ದಾಖಲಾಗಿತ್ತು. ಬಳಿಕ ಬಳಿಕ ತಹಸೀಲ್ದಾರ್ ನಾಪತ್ತೆಯಾಗಿದ್ದಾರೆ. ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದು, ಅದಕ್ಕೂ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

ತಹಸೀಲ್ದಾರ್ ಕರ್ತವ್ಯಕ್ಕೆ ಹಾಜರಾಗಿಲ್ಲ. ಸದ್ಯಕ್ಕೆ ಅವರ ಕೆಲಸಗಳನ್ನು ಉಪತಹಸೀಲ್ದಾರ್ ಮಾಡುತ್ತಿದ್ದು, ಮುಂದೆ ಅವರು ಹಾಜರಾಗದೆ ಇದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net