

ಕಲಬುರಗಿ: ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದಲ್ಲಿನ ಕ್ರೆಸ್ಟ್ ಶ್ರೀಮಂತಿ ಇಂದಿರಾ ಗಾಂಧಿ ವಸತಿ ಶಾಲೆ ಹಾಗೂ ನಿಲಯಕ್ಕೆ ಮಂಗಳವಾರ ಲೋಕಾಯುಕ್ತ ಡಿಎಸ್‌ಪಿ ಗೀತಾ ಬೇನಹಾಳ ಭೇಟಿ ನೀಡಿ, ಪರಿಶೀಲಿಸಿದರು.
ನಿಲಯದಲ್ಲಿ ನೀರಿನ ಅಭಾವ ಕಂಡು ಬಂದಿದ್ದು, ಕೋಣೆಗಳಲ್ಲಿ ಸ್ವಚ್ಛತೆ ಕೊರತೆ, ಬೆಡ್ ಅಸ್ತವ್ಯಸ್ತ, ದುರ್ನಾತ ಬೀರುವ ಶೌಚಗೃಹ, ಬಳಸಲು ಯೋಗ್ಯವಲ್ಲದಂತ ಸ್ಥಿತಿಯಲ್ಲಿ ಇಲ್ಲದಕ್ಕೆ ವಿದ್ಯಾರ್ಥಿನಿಯುರು ಶೌಚಕ್ಕೆ ಹೊರಗೆ ಹೋಗುತ್ತಿರುವ ಮಾಹಿತಿ ಪಡೆದಿದ್ದಾರೆ. ಸ್ಟಾಕ್ ರೆಜಿಸ್ಟರ್ ಪರಿಶೀಲಿಸಿದ್ದು, ದಿನಸಿ, ಇತರೆ ಸಾಮಗ್ರಿ ಇಲ್ಲದಿರುವುದು ಕಂಡು ಬಂದಿದೆ ಎಂದು ತಿಳಿಸಿದರು.
ಕೋಳಕೂರದ ಎರಡು ಅಂಗನವಾಡಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಹಾಜರಿ ಪುಸ್ತಕದಲ್ಲಿ ಸುಮಾರು, ೩೦, ೨೫ ಮಕ್ಕಳಿದ್ದು, ಕೇಂದ್ರದಲ್ಲಿ ಇದ್ದಿರುವುದಿಲ್ಲ. ಎರಡೂ ಅಂಗನವಾಡಿ ಮಕ್ಕಳಿಗೆ ಒಂದು ಚಿಕ್ಕ ಪಾತ್ರೆಯಲ್ಲಿ ಅಡುಗೆ ಮಾಡಲಾಗಿದೆ. ಒಂದು ಅಂಗನವಾಡಿಯಲ್ಲಿ ಅಡುಗೆಯೇ ಮಾಡಿಲ್ಲ ಎಂಬುದು ಧೂಳು ತಿನ್ನುತ್ತಿದ್ದ ಗ್ಯಾಸ್ ವೀಕ್ಷಿಸಿದಾಗ ತಿಳಿದು ಬಂದಿದೆ. ಮೇಲ್ವಿಚಾರಕರು, ಹಿರಿಯ ಅಧಿಕಾರಿಗಳು ಕಾಲ ಕಾಲಕ್ಕೆ ಭೇಟಿ ನೀಡದಿರುವುದರಿಂದ ಸಹಾಯಕಿಯರು ದಿನಸಿಯನ್ನು ಸ್ವಂತಕ್ಕೆ ಬಳಸುತ್ತಿದ್ದಾರೆ ಎಂದು ಡಿಎಸ್‌ಪಿ ಗೀತಾ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂಬAಧಿಸಿದ ಅಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ.