ಲೋಕಾಯುಕ್ತ ಬಲೆಗೆ ಎಇಇ ಬಿರಾದಾರ

IMG-20230216-WA0048.jpg
Published on


ಬೆಳಗಾವಿ: ಅಭಿವೃದ್ಧಿ ಕಾಮಗಾರಿಯ ಪೆಂಡಿಂಗ್ ಬಿಲ್ ಬಿಡುಗಡೆ ಮಾಡಲು ಹಣದ ಬೇಡಿಕೆಯಿಟ್ಟಿದ್ದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ಎಂ.ಎಸ್.ಬಿರಾದಾರ ಪಾಟೀಲ ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬಡಾಲ ಅಂಕಲಗಿ ಗ್ರಾಮದಲ್ಲಿ ಕೈಗೊಂಡಿದ್ದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡು ತಿಂಗಳು ಕಳೆದಿತ್ತು. ಆದರೆ, ಪೆಂಡಿಂಗ್ ಬಿಲ್ ನೀಡಿರಲಿಲ್ಲ. ಈ ಕುರಿತು ಮೇಲಿಂದ ಮೇಲೆ ಬಿಲ್ ಬಿಡುಗಡೆಗೆ ಮನವಿ ಮಾಡಿದರೂ ಬಿಲ್ ಸಹಿಗಾಗಿ ಐದು ಸಾವಿರ ರೂ. ಬೇಡಿಕೆಯಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರ ರಾಮನಗೌಡ ಪಾಟೀಲ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ನಗರದ ಕಚೇರಿಯಲ್ಲಿ ಗುರುವಾರ ಗುತ್ತಿಗೆದಾರರನಿಂದ  4 ಸಾವಿರ ರೂ. ಲಂಚ ಪಡೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ಕುರಿತು ತನಿಖೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಲೋಕಾಯುಕ್ತ ಎಸ್‌ಪಿ ಯಶೋದಾ ವಂಟಗೋಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net