ಪ್ರಮುಖ ರಾಜಕೀಯ ಪಕ್ಷದ ಅಭ್ಯರ್ಥಿಗಳ ಜತೆಗೆ ನಾಲ್ವರ ನಾಮಪತ್ರ ತಿರಸ್ಕೃತ

88
Published on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಲ್ಲಿಕೆಯಾದ ನಾಮಪತ್ರಗಳ ಪೈಕಿ ಎರಡು ರಾಜಕೀಯ ಪಕ್ಷಗಳ ನಾಯಕರದ್ದು ಸೇರಿದಂತೆ ನಾಲ್ವರ ಅಭ್ಯರ್ಥಿಗಳ ಉಮೇದುವಾರಿಕೆ ತಿರಸ್ಕೃತಗೊಂಡಿವೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಮಾ.28 ರಿಂದ ಏ.4 ರವರೆಗೆ 36 ಅಭ್ಯರ್ಥಿಗಳು ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್.ರವೀಂದ್ರಗೆ ಉಮೇದುವಾರಿಕೆ ಸಲ್ಲಿಸಿದ್ದರು. ಇವುಗಳ ಪರಿಶೀಲನೆ ಕಾರ್ಯವು ಶುಕ್ರವಾರ ನಡೆಯಿತು. ಇದೇ ವೇಳೆ ನಾನಾ ಕಾರಣಗಳ ಹಿನ್ನೆಲೆಯಲ್ಲಿ ನಾಲ್ವರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿವೆ. 32 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿವೆ ಎಂದು ಘೋಷಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ 5 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 3 ಸೇರಿದಂತೆ ೮ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲು ಹೆಚ್ಚಿನ ಅಭ್ಯರ್ಥಿಗಳ ಉತ್ಸುಕತೆ ಕಂಡು ಬಂದಿದೆ.

ಬಾಕ್ಸ್
ತಿರಸ್ಕೃತ ನಾಮಪತ್ರ
ಡಿ.ಇ.ಮಾರುತಿ ಪ್ರಸನ್ನ ಕುಮಾರ್ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ಬಿ.ಎಂ.ನಾರಾಯಣಸ್ವಾಮಿ (ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ), ಪಕ್ಷೇತರ ಅಭ್ಯರ್ಥಿಗಳಾದ ಎಲ್.ನಾಗರಾಜ್ ಮತ್ತು ರಾಮಯ್ಯ ಸಲ್ಲಿಕೆಯ ನಾಮಪತ್ರಗಳು ತಿರಸ್ಕೃತಗೊಂಡಿವೆ.

ಬಾಕ್ಸ್
ಅಂಗೀಕಾರಗೊಂಡ ನಾಮಪತ್ರಗಳು
ಎಂ.ಎಸ್. ರಕ್ಷಾ ರಾಮಯ್ಯ (ಕಾಂಗ್ರೆಸ್), ಡಾ. ಕೆ.ಸುಧಾಕರ್ (ಬಿಜೆಪಿ), ಪಿ.ಮಹದೇವ್ (ಬಹುಜನ್ ಸಮಾಜ ಪಾರ್ಟಿ), ಎಂ.ಪಿ.ಮುನಿವೆಂಕಟಪ್ಪ (ಸಿಪಿಎಂ), ಎನ್.ಕಲಾವತಿ (ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ, ಕಮ್ಯೂನಿಸ್ಟ್), ಎಸ್.ನಾಗೇಶ್ (ದಿಗ್ವಿಜಯ ಭಾರತ ಪಾರ್ಟಿ), ಟಿ.ಆರ್.ನಾರಾಯಣರಾವ್ (ಇಂಡಿಯನ್ ಲೇಬರ್ ಪಾರ್ಟಿ, ಅಂಬೇಡ್ಕರ್ ಫುಲೆ), ವಿ.ವೆಂಕಟೇಶ ಮೂರ್ತಿ (ಉತ್ತಮ ಪ್ರಜಾಕೀಯ ಪಾರ್ಟಿ), ಜಿ.ಸುಬ್ರಮಣಿ ಶೆಟ್ಟಿ (ಕರ್ನಾಟಕ ರಾಷ್ಟ್ರ ಸಮಿತಿ), ೨೩ ಪಕ್ಷೇತರ ಸೇರಿದಂತೆ 32 ಅಭ್ಯರ್ಥಿಗಳು ನಾಮಪತ್ರ ಅಂಗೀಕಾರಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net