ರಸ್ತೆ ಅಪಘಾತದಲ್ಲಿ ಮಹಿಳೆ ಸಾವು

19102020 Kudligi Accident
Published on

ಲೋಕಾಪುರ: ಸಮೀಪದ ಮೆಟಗುಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಕೆಲಸ ಮಾಡುತ್ತಿದ್ದ ಮಹಿಳೆ ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾರೆ. ಬಾಗಲಕೋಟೆ ಮುಚಖಂಡಿ ಕ್ರಾಸ್ ನಿವಾಸಿ ಮಮತಾಜ್ ಬಾಬು ನದ್ಾ (45) ಮೃತ ಮಹಿಳೆ. ಶುಕ್ರವಾರ ಸಂಜೆ ಕೆಲಸ ಮುಗಿಸಿ ಸಹೋದ್ಯೋಗಿಯೊಂದಿಗೆ ಬೈಕ್ ಹಿಂಬದಿಯಲ್ಲಿ ಕುಳಿತು ಮೆಟಗುಡ್ಡದಿಂದ ಮುಧೋಳಕ್ಕೆ ಹೋಗುತ್ತಿದ್ದಾಗ ರೂಗಿ ಕ್ರಾಸ್ ಹತ್ತಿರ ಅಪಘಾತ ಸಂಭವಿಸಿದೆ. ಬೈಕ್ ಸವಾರ ರೋಡ್ ಬ್ರೇಕ್ ಗಮನಿಸದೆ ಜಿಗಿಸಿದ್ದರಿಂದ ಹಿಂದೆ ಕುಳಿತ ಮಮತಾಜ್ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಮುಧೋಳ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾರೆ. ಈ ಕುರಿತು ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಶಿವಶಂಕರಿ ಮುಕರಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net