

ಲೋಕಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕರೊನಾ 2ನೇ ಅಲೆಯನ್ನು ನಿಯಂತ್ರಿಸುವಲ್ಲಿ ವಿಲವಾಗಿವೆ. ಇದರಿಂದ ಜನತೆಗೆ ಸಂಕಷ್ಟ ಎದುರಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಆರೋಪಿಸಿದರು.
ಪಟ್ಟಣದಲ್ಲಿ ಜಿಲ್ಲಾ ಯೂತ್ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡ ಕರೊನಾ ಸೋಂಕಿತರಿಗೆ ಹೋಮ್ ಐಸೋಲೇಷನ್ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರೊನಾ 2ನೇ ಅಲೆ ಒಕ್ಕರಿಸಲಿದೆ ಎನ್ನುವುದರ ಕುರಿತು ಈ ರಾಜ್ಯದ ತಜ್ಞರ ಸಮಿತಿ ಮೂರ‌್ನಾಲ್ಕು ತಿಂಗಳ ಹಿಂದೆ ಸರ್ಕಾರಕ್ಕೆ ತಿಳಿಸಿದ್ದರೂ ಎಚ್ಚೆತ್ತುಕೊಳ್ಳಲಿ. ಹೀಗಾಗಿ ಕರೊನಾ ಹೆಮ್ಮಾರಿ ಉಲ್ಬಣಗೊಂಡು ಆಮ್ಲಜನಕ, ವೆಂಟಿಲೇಟರ್, ಬೆಡ್‌ಗಳ ಕೊರತೆಯಿಂದ ಸಾವು ನೋವು ಹೆಚ್ಚಾಗುತ್ತಿವೆ ಎಂದು ದೂರಿದರು.
ಕಾಂಗ್ರೆಸ್ ಮುಖಂಡ ಶಿವಾನಂದ ಉದಪುಡಿ ಮಾತನಾಡಿ, ರಾಜ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕರೊನಾ ಪರೀಕ್ಷೆಗಳನ್ನು ಕಡಿಮೆ ಮಾಡಿ ಸಾವಿನ ಅಂಕಿ ಅಂಶಗಳನ್ನು ಮರೆಮಾಚಿಸುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ ಮಾತನಾಡಿ, ಕರೊನಾ ಬರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಾಂಗ್ರೆಸ್ ಪಕ್ಷ ವತಿಯಿಂದ ಕಷಾಯ ಕಿಟ್‌ಗಳನ್ನು ತಯಾರಿಸಿದ್ದು, ಮುಧೋಳ ತಾಲೂಕಿನಾದ್ಯಂತ ಪ್ರತಿ ಮನೆ ಮನೆಗೂ ತಲುಪಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಾಶಿನಾಥ ಹುಡೇದ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲೋಕಣ್ಣ ಕೊಪ್ಪದ, ಸುಭಾಸ ಗಸ್ತಿ, ಭೀಮಸೆಪ್ಪ ಹಲಕಿ, ಗೋವಿಂದ ಕೌಲಗಿ, ರಫೀಕ್ ಬೈರಕದಾರ, ಪಿಕೆಪಿಎಸ್ ಅಧ್ಯಕ್ಷ ಆನಂದ ಹಿರೇಮಠ, ವಿನಯ ತಿಮ್ಮಾಪುರ, ಯೂತ್ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ರಾಹುಲ್ ಕಲೂತಿ, ಚಿನ್ನು ಅಂಬಿ, ಮುಧೋಳ ಪ್ರಧಾನ ಕಾರ್ಯದರ್ಶಿ ರವಿ ಚವರಡ್ಡಿ, ಲೋಕಾಪುರ ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ತುಗಲಗಟ್ಟಿ, ಬಾದಾಮಿ ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತ ಕಾನಗೌಡ, ಗುಳೇದಗುಡ್ಡ ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ ಕಾಂಬಳೆ, ಕೃಷ್ಣ ಹೂಗಾರ, ಶಶಿಧರ ಬೆಳಗಲಿ ಇದ್ದರು.
ಸರ್ಕಾರ ಘೋಷಣೆ ಮಾಡಿದ ಆರ್ಥಿಕ ಪ್ಯಾಕೇಜ್ ಅವೈಜ್ಞಾನಿಕವಾಗಿದೆ. ಇದು ಸಂಕಷ್ಟದಲ್ಲಿರುವ ಜನರ ಕಣ್ಣಿಗೆ ಮರೆಮಾಚುವ ತಂತ್ರವಾಗಿದೆ. ಮಾರುಕಟ್ಟೆಯಲ್ಲಿ ಪ್ರತಿಯೊಂದು ವಸ್ತುಗಳ ಬೆಲೆ ದುಬಾರಿ ಆಗಿದ್ದರಿಂದ ಸರ್ಕಾರ ಘೋಷಣೆ ಮಾಡಿದ 2-3 ಸಾವಿರ ರೂ. ಯಾವುದಕ್ಕೂ ಸಾಕಾಗಲ್ಲ. ಮರುಪರಿಶೀಲಿಸಿ ಸೂಕ್ತವಾದ ಪರಿಹಾರ ಘೋಷಣೆ ಮಾಡಬೇಕು.
- ಎಸ್.ಜಿ.ನಂಜಯ್ಯನಮಠ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ