ಕಲಾವಿದರಿಗೆ ಸಹಕಾರ ನೀಡಿ

27-LKP-4B
Published on

ಲೋಕಾಪುರ: ಜಾನಪದ ರಂಗಭೂಮಿಗೆ ವಿಶಿಷ್ಟ ಕೊಡುಗೆ ನೀಡಿದ ಬಯಲಾಟ ಕಲಾವಿದರ ಸೇವೆ ಸ್ಮರಣೀಯ. ಎಲೆಮರೆ ಕಾಯಿಯಂತರು ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಾಳಾಸಾಹೇಬ ಲೋಕಾಪುರ ಹೇಳಿದರು.

2019ನೇ ಸಾಲಿನ ಕರ್ನಾಟಕ ಬಯಲಾಟ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತೆ, ಕಲಾವಿದೆ ಶಾಂತವ್ವ ಜಾಲಿಕಟ್ಟಿ ಅವರನ್ನು ಪಟ್ಟಣದಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ಜಾನಪದ ಕಲೆಗಳು ಯಾರ ಸೊತ್ತು ಅಲ್ಲ. ಅಂತಹ ಕಲೆಗಳ ಪ್ರಸಾರಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಕಲಾವಿದರಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಹೇಳಿದರು.

ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಶಿವಾನಂದ ಶೆಲ್ಲಿಕೇರಿ, ಪಿ.ಬಿ. ದುತ್ತರಗಿ, ಪ್ರತಿಷ್ಠಾನ ಸದಸ್ಯ ಚಂದ್ರಶೇಖರ ದೇಸಾಯಿ, ಪಾರಿಜಾತ ಕಲಾವಿದೆ ದುರ್ಗವ್ವ ಮುಧೋಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net