ಲೋಕ ಕಲ್ಯಾಣಾರ್ಥ ವಾಸವಿಯ ಅಗ್ನಿಪ್ರವೇಶ

Kampli Vasavi
ಕಂಪ್ಲಿಯಲ್ಲಿ ವಾಸವಿ ವಿಶ್ವರೂಪ ದರ್ಶನ ನಿಮಿತ್ತ ಕನ್ಯಕಾಪರಮೇಶ್ವರಿ ದೇವಿಗೆ ತರಹೇವಾರಿ ಹೂಗಳಿಂದ ಅಲಂಕರಿಸಲಾಗಿತ್ತು.
Published on

ಕಂಪ್ಲಿ: ವಾಸವಿ ವಿಶ್ವರೂಪ ದರ್ಶನ(ಅಗ್ನಿಪ್ರವೇಶ)ಪವಿತ್ರ ದಿನಾಚರಣೆ ನಿಮಿತ್ತ ಇಲ್ಲಿನ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಯುವಜನ ಸಂಘದಿಂದ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಸಂಘದ ಅಧ್ಯಕ್ಷ ಧನಪಾಲ್ ಗುರುಕೃಷ್ಣ ಮಾತನಾಡಿ, ಲೋಕ ಕಲ್ಯಾಣಾರ್ಥ ಕಲಿಯುಗದಲ್ಲಿ ಅಧರ್ಮ, ಅತ್ಯಾಚಾರ, ಅನೀತಿ, ದುಷ್ಕೃತ್ಯಗಳನ್ನು ಅಂತ್ಯಗೊಳಿಸಲಿಕ್ಕಾಗಿ, ಸತ್ಯ, ಧರ್ಮ, ಶಾಂತಿ, ಅಹಿಂಸೆ, ಕರುಣೆ, ತ್ಯಾಗಗಳನ್ನು ದಿವ್ಯಾಸ್ತ್ರಗಳನ್ನಾಗಿಸಿಕೊಂಡ ಆದಿಪರಾಶಕ್ತಿಯಾದ ವಾಸವಿಯು ಕನ್ಯಕಾಪರಮೇಶ್ವರಿಯಾಗಿ ಅಗ್ನಿ ಪ್ರವೇಶ ಮಾಡಿದರು ಎಂದರು.

ದೇವಿಗೆ ಪಂಚಾಮೃತ ಅಭಿಷೇಕ, ಗಂಗಾ ಭಾಗೀರಥಿ ಪೂಜೆ, ನವಗ್ರಹಸಹಿತ ಶ್ರೀಮಹಾಲಕ್ಷ್ಮೀ ಹೋಮ, ಅನ್ನಸಂತರ್ಪಣೆ, ಸಂಜೆ ಲಲಿತಾ ಸಹಸ್ರನಾಮ ಪಾರಾಯಣ, ಸಾಮೂಹಿಕ ಕುಂಕುಮಾರ್ಚನೆ, ಅಷ್ಠಾವದಾನ ಸೇವೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಗಳಿಂದ ಜರುಗಿದವು. ಆರ್ಯ ವೈಶ್ಯ ಸಂಘದ ಅಧ್ಯಕ್ಷ ಡಿ.ವಿ.ಸುಬ್ಬಾರಾವ್, ಧರ್ಮಕರ್ತ ವೈ.ಚಂದ್ರಮೋಹನ ಶ್ರೇಷ್ಠಿ, ವಾಸವಿ ಯುವಜನ ಸಂಘದ ಪದಾಧಿಕಾರಿಗಳಾದ ಡಿ.ಮಂಜೇಶ, ಸುನೀಲ್‌ಕುಮಾರ್, ರಾಜೇಂದ್ರ, ಅಖಿಲ್, ಡಿ.ಹರಿಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net