

ತೀರ್ಥಹಳ್ಳಿ: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರಾದ ಉಭಯ ಜಗದ್ಗುರುಗಳ ಪೂರ್ಣಾನುಗ್ರಹದಿಂದ ಸೆ.10, 11ರಂದು ಲೋಕಕಲ್ಯಾಣಾರ್ಥ ಮಹಾರುದ್ರ ಪುರಶ್ಚರಣ ಹೋಮ ನಡೆಸಲು ಸಂಕಲ್ಪಿಸಲಾಗಿದೆ ಸೊಪ್ಪು ಗುಡ್ಡೆ ರಾಘವೇಂದ್ರ ತಿಳಿಸಿದ್ದಾರೆ.
ಶ್ರಾವಣ ಬಹುಳ ಏಕಾದಶಿ ದಿನವಾದ 10ರಂದು ಬೆಳಗ್ಗೆ 8ಕ್ಕೆ ಫಲನ್ಯಾಸ, ದೇವತಾ ಪ್ರಾರ್ಥನೆ, ತುಂಗಾ ನದಿಯಿಂದ ಆಗ್ರೋದಕ, ಅನಯನ ಗಣಹೋಮ, ಮಹಾರುದ್ರ ಪುರಶ್ಚರಣ ಹೋಮ ಪ್ರಾರಂಭವಾಗಲಿದೆ. 11ರಂದು ಬೆಳಗ್ಗೆ 8ರಿಂದ ಪುಣ್ಯಾಹ, ಮಹಾರುದ್ರ ಪುರಶ್ಚರಣೆ ಹೋಮ ನಡೆಯಲಿದೆ. 12ಕ್ಕೆ ಪೂರ್ಣಾಹುತಿ, ಪ್ರಸಾದ ವಿನಿಯೋಗ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ ಎಂದರು.