

ಕಲಬುರಗಿ: ಮ್ಯುಟೇಷನ್ ಮತ್ತು ಪಹಣಿ ಹೆಸರು ಸೇರ್ಪಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಆಡಳಿತಾಧಿಕಾರಿ ಮತ್ತು ಗ್ರಾಮ ಸೇವಕ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದಿದ್ದಾರೆ. ಪಟ್ಟಣ ಉಪ ತಹಸೀಲ್ದಾರ್ ಕಚೇರಿಯ ಗ್ರಾಮ ಆಡಳಿತಾಧಿಕಾರಿ ಕಾಂತೇಶ, ಗ್ರಾಮ ಸೇವಕ ಅಖ್ತಾರ ಪಟೇಲ್ ವಿರುದ್ಧ ಸಿದ್ದರಾಮಯ್ಯ ಹಿರೇಮಠ ಲಂಚದ ದೂರು ನೀಡಿದ್ದರು. ಈ ಕುರಿತು ೩೦ ಸಾವಿರ ರೂ. ಬೇಡಿಕೆ ಇಟ್ಟಿದ್ದು, ಎರಡು ಸಾವಿರ ರೂ. ಲಂಚ ಪಡೆಯುವಾಗಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಲೋಕಾಯುಕ್ತ ಎಸ್‌ಪಿ ಬಿ.ಕೆ.ಉಮೇಶ ಮಾರ್ಗದರ್ಶನದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಅಕ್ಕಮಹಾದೇವಿ, ಸಿಬ್ಬಂದಿ ಮಲ್ಲಿನಾಥ, ರಾಣೋಜಿ, ಬಸವರಾಜ, ಅಸ್ಲಾಂ, ಯಮನೂರಪ್ಪ, ಫೈಮೋದ್ದೀನ್ ಕಾರ್ಯಾಚರಣೆ, ನಡೆಸಿ, ಬಂಧಿಸಿದ್ದಾರೆ.