ಕೊಲಾರದ ಸರ್ವೇ ಸೂಪರ್​ವೈಸರ್​ಗೆ ಲೋಕಾ ಶಾಕ್​

09_05_2025_KLR_PAGE_5
Published on

ಕೋಲಾರ: ಕೋಲಾರದ ಸರ್ವೇ ಇಲಾಖೆಯ ಸೂಪರ್​ವೈಸರ್​ ಸುರೇಶ್​ ಬಾಬು ಮನೆ, ಕಚೇರಿ, ಅಣ್ಣ-ತಮ್ಮಂದಿರ ಮನೆ, ಸ್ನೇಹಿತರ ಮನೆ ಸೇರಿ 6 ಕಡೆ ಗುರುವಾರ ಬೆಳ್ಳಂಬೆಳಗ್ಗೆ ಕೋಲಾರ, ಮಾಲೂರು ಹಾಗೂ ನಿಡಘಟ್ಟ ನಿವಾಸಗಳಿಗೆ ಬೆಂಗಳೂರು ಮತ್ತು ಕೋಲಾರದ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಕಡತಗಳನ್ನು ಮತ್ತು ಮನೆಯಲ್ಲಿ ಸಿಕ್ಕ ಬೆಳ್ಳಿ, ಬಂಗಾರ ವಶಪಡಿಸಿಕೊಂಡಿದ್ದಾರೆ.

ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ, ಸುರೇಶ್​ಬಾಬು ಅವರ ನಿಡಘಟ್ಟದ ಮನೆ, ತೋಟದ ಮನೆ ಹಾಗೂ ಗ್ರಾಮದ ಸಹೋದರನ ಮನೆ, ಮಾಲೂರಿನ ಅಣ್ಣ ಲಕ್ಷಿ$್ಮ ನಾರಾಯಣ, ವಿಜಯ ಕುಮಾರ್​, ಕೋಲಾರದ ವೈದ್ಯ ಪ್ರಸನ್ನಕುಮಾರ್​ ಹಾಗೂ ನಿವೃತ್ತ ಪಿಡಿಒ ನಾಗರಾಜ್​ ಮನೆ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.

ಸುರೇಶ್​ಬಾಬು ಮತ್ತು ಹೆಂಡತಿ ಹೆಸರಿನಲ್ಲಿದ್ದ ನಿವೇಶನ ಹಾಗೂ ಮಾಲೂರಿನ ಬಳಿ ಲೇಔಟ್​ ಮತ್ತು ಅಪಾರ್ಟ್​ಮೆಂಟ್​ ಹೊಂದಿರುವ ದಾಖಲೆಗಳು, ಅಣ್ಣ&ತಮ್ಮಂದಿರು ಮತ್ತು ಸ್ನೇಹಿತರ ಹೆಸರಿನಲ್ಲಿ ಇಟ್ಟಿದ್ದ ಕೆಲವು ಜಮೀನು ಮತ್ತು ನಿವೇಶನಗಳು ಹಾಗೂ ವಾಹನ ಹೊಂದಿರುವ ದಾಖಲೆ ವಶಪಡಿಸಿಕೊಂಡು, ವಿಚಾರಣೆಗೆ ಒಳಪಡಿಸಿದ್ದಾರೆ.

6 ತಿಂಗಳ ಹಿಂದೆಯಷ್ಟೇ ಸುರೇಶ್​ಬಾಬು ಮನೆ ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳಿಗೆ ಹಣ ಸೇರಿ ಸರ್ಕಾರಿ ಆಸ್ತಿ ಪತ್ರಗಳು, ಹಲವು ದಾಖಲೆಗಳು ಸಿಕ್ಕಿದ್ದವು. ಮತ್ತೆ ಹಲವು ದೂರುಗಳು ಬಂದ ಹಿನ್ನೆಲೆ ಗುರುವಾರ ಕೂಡ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಲೋಕಾ ಎಸ್ಪಿ ಧನಂಜಯ ನೇತೃತ್ವ ದಲ್ಲಿ ಡಿವೈಎಸ್​ಪಿ ಸಧೀರ್​, ಬೆಂಗಳೂರು ಡಿವೈಎಸ್​ಪಿ ಗಿರೀಶ್​, ಇನ್​ಸ್ಪೆಕ್ಟರ್​ ಗಳಾದ ರೇಣುಕಾ, ಆಂಜಿನಪ್ಪ, ಯಶ್ವಂತ್​ಕುಮಾರ್​, ಚಿಕ್ಕಬಳ್ಳಾಪುರ ಇನ್​ಸ್ಪೆಕ್ಟರ್​ ನಿರ್ಮಲಾ ಹಾಗೂ ಸಿಬ್ಬಂದಿ ಕಾರ್ಯಾ ಚರಣೆಯಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net