

ಕಂಪ್ಲಿ: ಪಟ್ಟಣದ ಇಂದಿರಾನಗರದ ಬನ್ನಿ ಮಹಾಂಕಾಳಿದೇವಿ ದೇವಸ್ಥಾನದಲ್ಲಿ ದುರ್ಗಾಷ್ಟಮಿ ನಿಮಿತ್ತ ಚಂಡಿ ಹೋಮ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗುರುವಾರ ಜರುಗಿದವು.
ಅರ್ಚಕ ಗಿರಿಭಟ್ ಪೌರೋಹಿತ್ಯದಲ್ಲಿ ಲೋಕ ಕಲ್ಯಾಣಾರ್ಥ ಚಂಡಿ ಹೋಮ, ಪೂರ್ಣಾಹುತಿ ನೆರವೇರಿತು.ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಮಹಾಂಕಾಳಿದೇವಿಗೆ ಫಲಪುಷ್ಪಾದಿಗಳಿಂದ ಅಲಂಕಾರ ಮಾಡಲಾಗಿತ್ತು.
ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸಿ.ಎಚ್.ವೆಂಕಟೇಶ್ವರರಾವ್ ಮಾತನಾಡಿ, ದಸರಾ ನಿಮಿತ್ತ ದೇವಿಯ ಅಲಂಕಾರ, ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸುತ್ತ ಬಂದಿದ್ದು, ಅ.12ರಂದು ವಿಜಯದಶಮಿ ನಿಮಿತ್ತ ಸಂಜೆ 5ಗಂಟೆಗೆ ಬನ್ನಿ ಮಹಾಂಕಾಳಿದೇವಿ ಮಹಾರಥೋತ್ಸವ ನಡೆಯಲಿದೆ ಎಂದರು.
ಮಂಡಳಿ ಪದಾಧಿಕಾರಿಗಳಾದ ನಾಗಪ್ಪ, ಆನಂದರಾವ್, ಸುರೇಶ, ಎಸ್.ಎಂ.ನಾಗರಾಜ, ಭಟ್ಟ ಪ್ರಸಾದ್, ಎಂ.ಶ್ರೀನಿವಾಸ, ಪ್ರಭಾಕರರೆಡ್ಡಿ, ಸೋಮನಾಥಸ್ವಾಮಿ, ಪಿ.ನಾಗೇಶ್ವರರಾವ್, ರಾಮಗೋಪಾಲರೆಡ್ಡಿ, ವೀರಭದ್ರಪ್ಪ, ಕೆ.ಎಂ.ವಾಗೀಶ, ಅರ್ಚಕ ಶ್ರೀನಿವಾಸ, ಜಿ.ಕೃಷ್ಣಕುಮಾರಿ, ಐ.ಸುಬ್ರಹ್ಮಣ್ಯಂ, ಪದ್ಮಾ ಇತರರಿದ್ದರು.